ಮುಂಬೈ: ಒಬ್ಬ ಆಟಗಾರ ಬಲಗೈಯಲ್ಲಿ ಬೌಲಿಂಗ್ ಮಾಡಿ ಎಡಗೈ ಬ್ಯಾಟಿಂಗ್ ನಡೆಸಿರುವುದನ್ನು ಈ ಹಿಂದೆ ಕಂಡಿದ್ದೇವೆ. ಆದರೆ ಇದೇ ಮೊದಲ ಬಾರಿ ಎಂಬಂತೆ ಇರಾನಿ ಕಪ್ ಟೂರ್ನಿಯಲ್ಲಿ ವಿದರ್ಭ ಬೌಲರ್ ಅಕ್ಷಯ್ ಕರ್ನೇವರ್ ಎರಡು ಕೈಗಳಲ್ಲೂ ಒಂದೇ ರೀತಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಪಂದ್ಯದಲ್ಲಿ ಎಡಗೈ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ಅಕ್ಷಯ್ ಅಂಪೈರ್ ಬಳಿ ತೆರಳಿ ಮುಂದಿನ ಓವರನ್ನು ಬಲಗೈಯಲ್ಲಿ ಬೌಲ್ ಮಾಡುವುದಾಗಿ ತಿಳಿಸಿದ್ದರು. ಬೌಲರ್ ಮನವಿಯನ್ನು ಕೇಳಿ ಅಂಪೈರ್ ಕೂಡ ಕ್ಷಣ ಶಾಕ್ ಆಗಿದ್ದರು.
Advertisement
Advertisement
ನಾಗ್ಪುರದಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ಘಟನೆ ನಡೆದಿದ್ದು, ಎಡಗೈಯಲ್ಲಿ ಬೌಲ್ ಮಾಡಿ ಎದುರಾಳಿ ತಂಡದ ಶ್ರೇಯಸ್ ಐಯ್ಯರ್ ವಿಕೆಟ್ ಪಡೆದಿದ್ದರು. ಬಳಿಕ ಇಶಾನ್ ಕಿಶಾನ್ ಬ್ಯಾಟಿಂಗ್‍ಗೆ ಇಳಿಯುತ್ತಿದಂತೆ ಬಲಗೈಯಲ್ಲಿ ಬೌಲಿಂಗ್ ಮಾಡಿದ್ದರು. 26 ವರ್ಷದ ಅಕ್ಷಯ್ ಪಂದ್ಯದ ಮೊದಲ ದಿನದಾಟದಲ್ಲಿ 15 ಓವರ್ ಗಳಲ್ಲಿ 50 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.
Advertisement
ದೇಶಿಯ ಕ್ರಿಕೆಟ್ ನಲ್ಲಿ ಅಕ್ಷಯ್ ಅವರ ಈ ತಂತ್ರಗಾರಿಕೆ ಹೆಚ್ಚು ಹೆಸರು ಪಡೆದಿದ್ದು, ಸದ್ಯ ಬಿಸಿಸಿಐನ ಟೀಂ ಇಂಡಿಯಾ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಲೆಗ್ ಸ್ಪಿನ್ನರ್ ಆಗಿ ವೃತ್ತಿ ಜೀವನ ಆರಂಭಿಸಿದ ಅಕ್ಷಯ್ ಎಡಗೈ ಬ್ಯಾಟ್ಸ್ ಮನ್ ಆಗಿದ್ದರು. ಆ ಬಳಿಕ ಬಲಗೈನಲ್ಲೂ ಬೌಲಿಂಗ್ ಮಾಡಲು ಯತ್ನಿಸಿ ಯಶಸ್ವಿಯಾಗಿದ್ದಾರೆ.
Advertisement
2017ರ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಅಕ್ಷಯ್ ಎರಡು ಕೈಗಳಲ್ಲಿ ಬೌಲಿಂಗ್ ಮಾಡುವ ಮೂಲಕ ಆಸೀಸ್ ಬ್ಯಾಟ್ಸ್ ಮನ್ ಗಳನ್ನು ಅಚ್ಚರಿಗೊಳಪಡುವಂತೆ ಮಾಡಿದ್ದರು. ಆಸೀಸ್ ತಂಡದ ತರಬೇತಿ ವೇಳೆ ಅಕ್ಷಯ್ ಆಸೀಸ್ ತಂಡದ ಮಾರ್ಕಸ್ ಸ್ಟೋಯಿನಿಸ್ ಅವರಿಗೆ ಬೌಲ್ ಮಾಡಿದ್ದರು.
ಮಹಾರಾಷ್ಟ್ರದ ಸಣ್ಣ ಹಳ್ಳಿಯಿಂದ ಬಂದ ಪ್ರತಿಭೆ ಅಕ್ಷಯ್ 2009-10ರಲ್ಲಿ ಕೂಚ್ ಬಿಹಾರ್ ಟ್ರೋಫಿ ಸರಣಿಯಲ್ಲಿ ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ವಿದರ್ಭ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಟೂರ್ನಿಯಲ್ಲಿ ಎಡಗೈ ಬೌಲಿಂಗ್ ಮಾಡಿ 10 ವಿಕೆಟ್, ಬಲಗೈಯಲ್ಲಿ ಬೌಲ್ ಮಾಡಿ 8 ವಿಕೆಟ್ ಪಡೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv