ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಅಕ್ಷತಾ ಪಾಂಡವಪುರ ಮಗುವಿಗೆ ಜನ್ಮ ನೀಡಿದ್ದಾರೆ.
ಬಿಗ್ ಬಾಸ್ ಮನೆಮಂದಿಗೆ ಒಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನಲ್ಲಿ ಸುಂದರಿ ಕವಿತಾ ಅವರನ್ನು ಮೆಚ್ಚಿಸಬೇಕು ಎಂದು ಬಿಗ್ ಬಾಸ್ ಹೇಳಿರುತ್ತಾರೆ. ಹಾಗೆಯೇ ಮನೆಯಲ್ಲಿರುವ ಸ್ಪರ್ಧಿಗಳು ಸುಂದರಿ ಕವಿತಾ ಅವರನ್ನು ಮೆಚ್ಚಿಸಲು ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಾರೆ.
Advertisement
ಇಂದಿನ ಸಂಚಿಕೆಯಲ್ಲಿ ಸುಂದರಿ ಕವಿತಾ ಅವರನ್ನು ಮೆಚ್ಚಿಸಲು ಮನೆ ಉಳಿದ ಸ್ಪರ್ಧಿಗಳು ಹುಲಿವೇಷ ಧರಿಸುತ್ತಾರೆ. ಅಲ್ಲದೇ ಸಾಂಸ್ಕೃತಿಕ ನೃತ್ಯ ಕಂಸಾಳೆ ಕೂಡ ಮಾಡಿ ಕವಿತಾ ಅವರನ್ನು ಮೆಚ್ಚಿಸಲು ಮನೆಯ ಸದಸ್ಯರು ಹರಸಾಹಸ ಪಡುತ್ತಾರೆ.
Advertisement
Advertisement
ಈ ನಡುವೆಯೇ ಬಿಗ್ ಬಾಸ್ ಮನೆಗೆ ಹೊಸ ಸದಸ್ಯ ಎಂಟ್ರಿ ನೀಡಿದ್ದು, ಹೊಸ ಜೀವವೊಂದು ಜನ್ಮ ಪಡೆದಿದೆ. ಈ ಟಾಸ್ಕ್‍ನಲ್ಲಿ ಅಕ್ಷತಾ ಮಗುವಿಗೆ ಜನ್ಮ ನೀಡಿದ್ದಾರೆ. ಅಕ್ಷತಾ ಜನ್ಮ ನೀಡಿದ ಮಗುವನ್ನು ಮನೆಯ ಎಲ್ಲ ಸದಸ್ಯರು ಎತ್ತಿಕೊಂಡು ಖುಷಿಪಟ್ಟಿದ್ದಾರೆ.
Advertisement
ಇದು ಕೇವಲ ಪ್ರೋಮೋ ಆಗಿದ್ದು, ಇಂದು ಸಂಜೆ ಈ ಸಂಚಿಕೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv