ರಿಷಿ ಸುನಕ್‌ ವಿದಾಯ ಭಾಷಣದ ವೇಳೆ ಗಮನಸೆಳೆದ ಪತ್ನಿ ಅಕ್ಷತಾ ಡ್ರೆಸ್-‌ ಫುಲ್‌ ಟ್ರೋಲ್‌

Public TV
2 Min Read
AKSHATA MURTHY 2

ಲಂಡನ್:‌ ಮಾಜಿ ಪ್ರಧಾನಿ ರಿಷಿ ಸುನಕ್‌ (Rishi Sunak) ಅವರ ವಿದಾಯ ಭಾಷಣದ ವೇಳೆ ಪತ್ನಿ ಅಕ್ಷತಾ ಮೂರ್ತಿ (Akshata Murthy) ಅವರ ಡ್ರೆಸ್‌ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಅಲ್ಲದೇ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

AKSHATA MURTHY

ಬ್ರಿಟಿಷ್ ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ರಿಷಿ ಸುನಕ್‌ ಅವರು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯ ಹೊರಗೆ ತಮ್ಮ ವಿದಾಯ ಭಾಷಣ ಮಾಡಿದರು. ಈ ವೇಳೆ ಪತ್ನಿ ಅಕ್ಷತಾ ಮೂರ್ತಿಯವರು ಪತಿಯ ಹಿಂದೆ ಶಾಂತವಾಗಿ ನಿಂತು ಭಾಷಣ ಕೇಳುತ್ತಿರುವುದು ಕಂಡುಬಂತು. ಆದರೆ ಅಕ್ಷತಾ ಮೂರ್ತಿ ಪತಿಯ ವಿದಾಯ ಭಾಷಣದ ವೇಳೆ ಧರಿಸಿದ್ದ ಡ್ರೆಸ್ (Akshata Murthy Dress) ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಕ್ಷತಾ ಅವರ ಈ ಉಡುಗೆ ಸಾಕಷ್ಟು ಟ್ರೋಲ್ ಆಗುತ್ತಿದೆ.

ಡ್ರೆಸ್‌ ಟ್ರೋಲ್‌ ಯಾಕೆ..?: ಅಕ್ಷತಾ ಅವರು ಕಡು ನೀಲಿ, ಬಿಳಿ ಮತ್ತು ಕೆಂಪು ಬಣ್ಣವಿರುವ ಉಡುಪನ್ನು ಧರಿಸಿದ್ದರು. ಸುನಕ್‌ನ ಭಾಷಣದ ಸಮಯದಲ್ಲಿ ಎಲ್ಲರ ಕಣ್ಣುಗಳು ಅಕ್ಷತಾ ಉಡುಪಿನತ್ತ ವಾಲಿದೆ. ಈ ಡ್ರೆಸ್ ಬೆಲೆ 395 ಪೌಂಡ್ ಅಂದರೆ ಬರೋಬ್ಬರಿ 42 ಸಾವಿರ ರೂಪಾಯಿ ಆಗಿರುತ್ತದೆ. ಹಾಗಾದ್ರೆ ಈ ಡ್ರೆಸ್‌ನಲ್ಲಿ ಏನಿತ್ತು? ಟ್ರೋಲ್‌ಗೆ ಏಕೆ ಕಾರಣವಾಯಿತು? ಎಂಬುದನ್ನು ನೋಡೋದಾದ್ರೆ ವಾಸ್ತವವಾಗಿ ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳು ಬ್ರಿಟಿಷ್ ಧ್ವಜವನ್ನು ಹೋಲುತ್ತವೆ. ಇದನ್ನೂ ಓದಿ: UK Elections 2024: ಕ್ಷಮೆ ಕೇಳಿ ಸೋಲಿನ ಹೊಣೆ ಹೊತ್ತುಕೊಂಡ ರಿಷಿ ಸುನಾಕ್‌

AKSHATA MURTHY 1

ಅಕ್ಷತಾ ಧರಿಸಿರುವ ಡ್ರೆಸ್‌ ಕೆಂಪು, ನೀಲಿ ಮತ್ತು ಬಿಳಿ ಪಟ್ಟೆಗಳನ್ನು ಹೊಂದಿತ್ತು. ಅವುಗಳು ಟೋರಿ ಧ್ವಜದ (The Tory Flag) ಬಣ್ಣಗಳಾಗಿವೆ. ಹೀಗಿರುವಾಗ ಅಕ್ಷತಾ ಮೂರ್ತಿ ಈ ಡ್ರೆಸ್ ತೊಡುವ ಮೂಲಕ ಟೋರಿಯ ಸದ್ಯದ ಪರಿಸ್ಥಿತಿಯನ್ನು ಬಿಂಬಿಸಿದ್ದಾರೆ ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ.

ಸದ್ಯ ಅಕ್ಷತಾ ಡ್ರೆಸ್‌ ಟ್ರೋಲ್‌ ಆಗುತ್ತಿದ್ದು, ಅಕ್ಷತಾ ಮೂರ್ತಿ ಅವರ ಉಡುಗೆ ಸ್ಟೀರಿಯೋಗ್ರಾಮ್ ಆಗಿದೆ ಎಂದು ಓರ್ವ ಬಳಕೆದಾರ ಹೇಳಿದರೆ, ಇನ್ನೊಬ್ಬ ಈ ಡ್ರೆಸ್‌ ಅನ್ನು ತುಂಬಾ ದೂರದಿಂದ ನೀವು ನೋಡಿದರೆ, ʼನೀವು ಕ್ಯಾಲಿಫೋರ್ನಿಯಾಗೆ ಹಾರುತ್ತಿರುವ ವಿಮಾನವನ್ನು ನೋಡುತ್ತೀರಿ’ ಎಂದು ಹೇಳಿದ್ದಾರೆ. ಹೀಗೆ ಹಲವಾರು ಮಂದಿ ಡ್ರೆಸ್‌ ಬಗ್ಗೆ ಟ್ರೋಲ್‌ ಮಾಡುತ್ತಿದ್ದಾರೆ.

Share This Article