ಇಂದು ಬಿಗ್ ಬಾಸ್ ಮನೆಯಲ್ಲಿ ಇಷ್ಟಕಷ್ಟ ಎನ್ನುವ ಆಟವೊಂದನ್ನು ಏರ್ಪಡಿಸಲಾಗಿತ್ತು. ಈ ಆಟಕ್ಕಾಗಿಯೇ ಹಲವು ವಸ್ತುಗಳನ್ನು ಬಾಕ್ಸ್ ನಲ್ಲಿ ತಂದಿರಿಸಲಾಗಿತ್ತು. ಆ ಬಾಕ್ಸ್ ನಲ್ಲಿ ಗೊಂಬೆ, ಹಾರ್ಟ್, ಫೀಡಿಂಗ್ ಬಾಟಲ್ ಸೇರಿದಂತೆ ಹಲವು ವಸ್ತುಗಳು ಇದ್ದವು. ಆ ವಸ್ತುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ತಮಗಿಷ್ಟ ಪಟ್ಟವರಿಗೆ ಅದನ್ನು ಕೊಡುವುದು ಈ ಆಟದ ಉದ್ದೇಶವಾಗಿತ್ತು. ಅಲ್ಲದೇ, ಅದನ್ನು ಯಾಕೆ ಆಯ್ಕೆ ಮಾಡಿಕೊಂಡರು ಮತ್ತು ಅದನ್ನು ಇಷ್ಟದವರಿಗೆ ಕೊಡುವುದಕ್ಕೆ ಕಾರಣವನ್ನೂ ಹೇಳಬೇಕಿತ್ತು.
ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರದ್ದೇ ಮಾತು. ಅತೀ ಹೆಚ್ಚು ಮಾತನಾಡುವ ಸ್ಪರ್ಧಿ ಎಂದು ಕೆಲವರು ಮನೆಯಲ್ಲೇ ಬೇಸರ ಮಾಡಿಕೊಂಡಿದ್ದಾರೆ. ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿ ಸುದೀಪ್ ಅವರಿಂದಲೂ ಸೋನು ಬುದ್ದಿ ಹೇಳಿಕೊಂಡಿದ್ದಾರೆ. ಅಂತಹ ಸೋನುಗೆ ಫೀಡಿಂಗ್ ಬಾಟಲು ಕೊಟ್ಟು ಅಚ್ಚರಿ ಮೂಡಿಸಿದ್ದಾರೆ ಅಕ್ಷತಾ. ಈ ಮನೆಯಲ್ಲಿ ಸೋನು ಮಾತಾಡೋ ಮಾತುಗಳು ಎಫೆಕ್ಟ್ ಆಗ್ತಾವು. ಮಾತಾಡ್ಬೇಕು ಅನಿಸ್ತಾಗ ಈ ಬಾಟ್ಲು ಬಾಯಲ್ಲಿ ಇಟ್ಕೋ ಶಾಂತಾಗ್ತಿಯಾ ಎಂದು ಬುದ್ದಿ ಹೇಳಿದ್ದಾರೆ. ಇದನ್ನೂ ಓದಿ:ತಮಿಳು ಮತ್ತು ತೆಲುಗಿಗೆ ರಿಮೇಕ್ ಆಗಲಿದೆ ಶಶಾಂಕ್ ನಿರ್ದೇಶನದ ‘ಲವ್ 360’ ಸಿನಿಮಾ
ಸೋನು ಶ್ರೀನಿವಾಸ್ ಗೌಡ ಆ ಮಾತನ್ನು ಅನುಮೋದಿಸಿದ್ದೇನೆ ಎನ್ನುವಂತೆ ಬಾಟಲು ಪಡೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಏನು ಕೊಟ್ಟಿದ್ದಾರೆ ಎನ್ನುವುದು ವಿಶೇಷ. ಸದ್ಯ ಅಪ್ ಲೋಡ್ ಆಗಿರುವ ವಿಡಿಯೋದಲ್ಲಿ ಅಕ್ಷತಾ ಬಾಟಲ್ ಎತ್ತಿಕೊಳ್ಳುವ ಮತ್ತು ಅದನ್ನು ಸೋನುಗೆ ಕೊಡುವ ದೃಶ್ಯ ಮಾತ್ರ ರಿಲೀಸ್ ಆಗಿದ್ದು, ಸೋನು ಗೌಡ ಅದಕ್ಕೆ ಕೊಟ್ಟ ಉತ್ತರ ಏನು ಅನ್ನುವುದನ್ನು ಕಾದು ನೋಡಬೇಕಿದೆ.