ಮುಂಬೈ: ಕಳೆದ ಕೆಲ ದಿನಗಳ ಹಿಂದೆ ನಟ ಕಮಲ್ ಹಾಸನ್ ಅವರ 2ನೇ ಪುತ್ರಿ ಅಕ್ಷರಾ ಹಾಸನ್‍ರ ಕೆಲ ಅರೆಬೆತ್ತಲೆ ಖಾಸಗಿ ಫೋಟೋ ಲೀಕ್ ಆಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಅಕ್ಷರಾ ಅವರ ಮಾಜಿ ಪ್ರಿಯಕರ ತನುಜ್ ವಿರ್ವಾನಿ ಅವರನ್ನ ವಿಚಾರಣೆ ನಡೆಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಫೋಟೋ ಲೀಕ್ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ಅಕ್ಷರಾ ಅವರು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬಳಿಕ ಪ್ರಕರಣದಲ್ಲಿ ಮುಂಬೈ ಸೈಬರ್ ಕ್ರೈಂ ಪೊಲೀಸರು ಹಲವರನ್ನು ತನಿಖೆ ನಡೆಸಿದ್ದರು. ಇದರ ಭಾಗವಾಗಿಯೇ ಸದ್ಯ ತನುಜ್ ವಿರ್ವಾನಿ ಅವರ ಮೇಲಿನ ಶಂಕೆಯಿಂದ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.
Advertisement
@MumbaiPolice @Cybercellindia pic.twitter.com/JS1lJVdD6u
— Akshara Haasan (@Iaksharahaasan) November 7, 2018
Advertisement
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ತನುಜ್ ವಿರ್ವಾನಿ, ಪೊಲೀಸ್ ವಿಚಾರಣೆಯನ್ನು ಅಲ್ಲಗೆಳೆದಿದ್ದಾರೆ. ತಾವು ಯಾವುದೇ ವಿಚಾರಣೆಗೆ ಸಿದ್ಧ. ನಾನು ಇಂದಿಗೂ ಕೂಡ ಅಕ್ಷರಾ ಅವರ ಕ್ಷೇಮವನ್ನೇ ಬಯಸುತ್ತೇನೆ. ನಮ್ಮ ಪ್ರೀತಿಯ ವೇಳೆ ಇಂತಹ ಸಂಗತಿಗಳಿಗೆ ಅವಕಾಶ ನೀಡಿರಲಿಲ್ಲ. ಸ್ವತಃ ಬಯಕೆಗಳಿಗೆ ಅವುಗಳನ್ನು ಬಳಕೆ ಮಾಡಿಕೊಳ್ಳುವುದಿಲ್ಲ. ಇಂದಿಗೂ ನಾನು ಅವರ ಉತ್ತಮ ಸ್ನೇಹಿತನಾಗಿದ್ದು, ನಾನು ಇಂತಹ ತಾಂತ್ರಿಕ ಕಳ್ಳತನಗಳ ಬಗ್ಗೆ ಎಚ್ಚರಿಕೆ ವಹಿಸುತ್ತೇನೆ. ಯಾವುದೇ ಫೋಟೋಗಳನ್ನೂ ಕೂಡ ನಾನು ನನ್ನ ಮೊಬೈಲ್ ಫೋನ್‍ನಲ್ಲಿ ಸೇವ್ ಮಾಡುವುದಿಲ್ಲ. ಸತ್ಯ ನನ್ನ ಪರ ಇದ್ದು, ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನು ಓದಿ: ಕಮಲಹಾಸನ್ ಪುತ್ರಿ ಒಳಉಡುಪಿನಲ್ಲಿದ್ದ ಫೋಟೋ ಲೀಕ್: ಅಕ್ಷರಾ ಹೇಳಿದ್ದೇನು?
Advertisement
ಲೀಕ್ ಆದ ಚಿತ್ರಗಳು ಅಕ್ಷರಾ ಹಾಸನ್ ತಮ್ಮ ಬೆಡ್ ರೂಮ್ ನಲ್ಲಿ ತೆಗೆದುಕೊಂಡಿದ್ದ ಖಾಸಗಿ ಫೋಟೋಗಳಾಗಿದ್ದು, ಅವುಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. 2013ರ ವರೆಗೂ ಅಕ್ಷರಾ ಬಳಕೆ ಮಾಡುತ್ತಿದ್ದ ಐಫೋನ್ ನಲ್ಲಿ ಇದ್ದ ಫೋಟೋಗಳು ಇವು ಎನ್ನಲಾಗಿದೆ. ಈ ಹಿಂದೆಯು ಕೂಡ ಕಮಲ್ ಹಾಸನ್ ಅವರ ಮೊದಲ ಪುತ್ರಿ ಶೃತಿ ಹಾಸನ್ ಅವರು ಚಿತ್ರವೊಂದರಲ್ಲಿ ನಟನೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆಯೂ ಕೂಡ ಕಮಲ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಉಂಟಾಗಿತ್ತು.
Advertisement
https://www.instagram.com/p/BppAsI1BOi5/?utm_source=ig_embed
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews