CinemaLatestMain PostSouth cinema

ನಾನು ಅವನ ಬಗ್ಗೆ ಯೋಚಿಸಿದ್ರೆ, ಅವನಿಗೆ ನನ್ನ ಬಗ್ಗೆಯೇ ಚಿಂತೆ ಜಾಸ್ತಿ: ನಾಗಾರ್ಜುನ್

ಹೈದರಾಬಾದ್: ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ್ ಅವರು ತಮ್ಮ ಮಗ ನಾಗಚೈತನ್ಯ ಡಿವೋರ್ಸ್ ಕುರಿತಾಗಿ ಮೊದಲ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

 

ಸಂಕ್ರಾಂತಿ ಪ್ರಯುಕ್ತ ನಾಗಾರ್ಜುನ್ ಅವರು ಅಭಿನಯಿಸಿರುವ ಬಂಗಾರ‍್ರಾಜು ಸಿನಿಮಾ ತೆರೆಕಂಡಿದೆ. ಚಿತ್ರದ ಪ್ರಚಾರದ ವೇಳೆ ನಾಗಾರ್ಜುನ್ ಮಾತನಾಡಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ಬೇರೆ ಆದಾಗ ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಭಾವನಾತ್ಮಕವಾಗಿ ಹೇಳಿದ್ದಾರೆ. ಇದನ್ನೂ ಓದಿ:  190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ

ಡಿವೋರ್ಸ್ ಆದ ಸಂದರ್ಭಗಳಲ್ಲಿ ಅವನು ಅಷ್ಟೊಂದು ಶಾಂತನಾಗಿ ಇದ್ದಿದ್ದಕ್ಕೆ ಅವನ ಬಗ್ಗೆ ನನಗೆ ಹೆಮ್ಮೆ ಇದೆ. ಒಂದು ಮಾತು ಹೇಳುವಷ್ಟು ಕೂಡ ಆತ ಪ್ರಚೋದನೆಗೆ ಒಳಗಾಗಲಿಲ್ಲ. ಎಲ್ಲ ತಂದೆಯರ ರೀತಿ ನಾನು ಕೂಡ ಮಗನ ಬಗ್ಗೆ ಚಿಂತೆಗೆ ಒಳಗಾಗಿದ್ದೆ. ಆದರೆ ಅವನಿಗೆ ನನ್ನ ಬಗ್ಗೆಯೇ ಚಿಂತೆ ಜಾಸ್ತಿ ಆಗಿತ್ತು ಎಂದು ನಾಗಾರ್ಜುನ ಹೇಳಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

ಸೆಲೆಬ್ರಿಟಿ ದಂಪತಿ ನಾಗ ಚೈತನ್ಯ, ಸಮಂತಾ ಕಳೆದ ವರ್ಷ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈ ವಿಚಾರವಾಗಿ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿ ಸುಮ್ಮನಾಗಿದ್ದರು. ಈಗ ಮಗನ ಡಿವೋರ್ಸ್ ಬಗ್ಗೆ ಮುಕ್ತವಾಗಿ ಕೆಲವು ವಿಚಾರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

 

Leave a Reply

Your email address will not be published. Required fields are marked *

Back to top button