ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿನಿಸುಗಳಲ್ಲಿ ಅಕ್ಕಿ ಹಾಲು ಬಾಯಿಯೂ ಒಂದಾಗಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ ಕಡೆ ಇದನ್ನು ಅಕ್ಕಿ ಮನ್ನಿ ಅಂತಾನೂ ಕರೆಯುತ್ತಾರೆ. ಇದರಲ್ಲಿ ಜಿಡ್ಡಿನ ಅಂಶ ಹೆಚ್ಚು ಇರುವುದಿಲ್ಲ. ಅಲ್ಲದೆ ಸಕ್ಕರೆಯ ಅಂಶ ಕೂಡ ಇಲ್ಲದಿರುವುದರಿಂದ ಆರೋಗ್ಯಕ್ಕೂ ಒಳ್ಳೆಯದಾಗಿದೆ. ಹೀಗೆ ರುಚಿಕರ ಹಾಗೂ ಆರೋಗ್ಯಕರವಾದ ಅಕ್ಕಿ ಹಾಲುಬಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ದೋಸೆ ಅಕ್ಕಿ- 1 ಕಪ್
* ಉಪ್ಪು- ರುಚಿಗೆ ತಕ್ಕಷ್ಟು
* ತುಪ್ಪ- 3 ಚಮಚ
* ಪಡಿಮಾಡಿದ ಬೆಲ್ಲ- ಒಂದು ಕಪ್
* ತೆಂಗಿನ ಹಾಲು
* ಏಲಕ್ಕಿ ಪುಡಿ- ಅರ್ಧ ಚಮಚ
Advertisement
Advertisement
ಮಾಡುವ ವಿಧಾನ:
* ದೋಸೆ ಅಕ್ಕಿಯನ್ನು 2 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಉಪ್ಪು ಹಾಗೂ ತೆಳುವಾದ ತೆಂಗಿನ ಹಾಲನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. (ನೀರು ಹಾಕಿಯೂ ರಬ್ಬಬಹುದು)
* ಇತ್ತ ಒಂದು ಬಾಣಲೆಗೆ ತುಪ್ಪ ಸವರಿಕೊಂಡು ಅದನ್ನು ಒಲೆಯ ಮೇಲಿಟ್ಟು ನಂತರ ಅದಕ್ಕೆ ರುಬ್ಬಿದ ಹಿಟ್ಟು ಹಾಕಿಕೊಳ್ಳಿ. ಈಗ ಅದೇ ಮಿಕ್ಸಿ ಜಾರಿಗೆ ಒಂದು ಕಪ್ಪು ನೀರು ಹಾಕಿ ತೊಳೆದು ಹಿಟ್ಟಿಗೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
Advertisement
* ನಂತರ ಎರಡೂವರೆ ಕಪ್ ಆಗುವಷ್ಟು ದಪ್ಪ ತೆಂಗಿನ ಹಾಲು ಹಾಗೂ ಒಂದು ಕಪ್ ಬೆಲ್ಲ, ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿಟ್ಟು ಕೈ ಬಿಡದೆ ಮಿಕ್ಸ್ ಮಾಡುತ್ತಿರಬೇಕು. ಇಲ್ಲವೆಂದಲ್ಲಿ ಹಿಟ್ಟು ಗಂಟು ಗಂಟಾಗುತ್ತದೆ.
* ಹೀಗೆ ಹಿಟ್ಟು ದಪ್ಪಾಗುತ್ತಾ ಹೋಗುತ್ತದೆ. ಸ್ವಲ್ಪ ಹೊತ್ತಿನ ನಂತರ 2 ಚಮಚ ತುಪ್ಪ ಹಾಕಬೇಕು. ಬಳಿಕ ಚೆನ್ನಾಗಿ ಕಲಸಿಕೊಳ್ಳಿ.
Advertisement
* ಹಿಟ್ಟು ಗಟ್ಟಿಯಾದ ನಂತರ ಬಾಳೆ ಎಲೆ ಅಥವಾ ಒಂದು ದೊಡ್ಡದಾದ ಪ್ಲೇಟಿಗೆ ಹಾಕಿ ಅದನ್ನು ಹರಡಿಕೊಳ್ಳಬೇಕು. ತಣ್ಣಗಾದ ನಂತರ ಅದನ್ನು ಚೌಕಾಕಾರ ಅಥವಾ ತ್ರಿಕೋನಾಕಾರದಲ್ಲಿ ಕಟ್ ಮಾಡಿಕೊಂಡರೆ ಅಕ್ಕಿ ಹಾಲುಬಾಯಿ ಸೇವಿಸಲು ಸಿದ್ಧ.