ವಿಜಯಪುರ: ಬರದನಾಡು ಎಂದೇ ಕರೆಯಲ್ಪಡುವ ಐತಿಹಾಸಿಕ ನಗರಿಯ ಕುಡಿಯುವ ನೀರಿನ ಅಭಾವದ ಬಿಸಿ ಈಗ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೂ ತಟ್ಟಿದೆ. ವಿವಿಯ ಆವರಣದ ಬೋರ್‍ವೆಲ್ ಸೇರಿದಂತೆ ನೀರಿನ ಎಲ್ಲಾ ಮೂಲಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ವಿವಿಗೆ 6, 8 ಮತ್ತು 9 ನೇ ದಿನಾಂಕದಂದು ಮೂರು ದಿನಗಳ ರಜೆಯನ್ನು ಘೋಷಣೆ ಮಾಡಲಾಗಿದೆ.
Advertisement
ನೀರಿನ ವ್ಯವಸ್ಥೆ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೂ ವಿವಿಯ ಕುಲಪತಿ ಮನವಿ ಮಾಡಿದ್ದಾರೆ. ಟ್ಯಾಂಕರ್ ಮುಖಾಂತರವಾದ್ರೂ ನೀರು ಒದಗಿಸಲು ಮನವಿ ಮಾಡಲಾಗಿದೆ. ಕುಡಿಯುವ ನೀರಿನ ಅಭಾವಕ್ಕೆ ವಿವಿಗೆ ರಜೆ ನೀಡಿದ್ದು ಇದೇ ಮೊದಲ ಬಾರಿಯಾಗಿದೆ. ಇದು ರಾಜ್ಯ ಸರ್ಕಾರ ತಲೆತಗ್ಗಿಸುವ ವಿಷಯವಾಗಿದ್ದು, ಕೂಡಲೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲು ವಿವಿಯ ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
Advertisement
Advertisement
ವಿವಿಗೆ ಪ್ರತಿನಿತ್ಯ 12 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು, ಕೇವಲ 1 ಲಕ್ಷ ಲೀಟರ್ ನೀರನ್ನು ಜಿಲ್ಲಾಡಳಿತ ಒದಗಿಸುತ್ತಿದೆಯಂತೆ. ಆದ್ದರಿಂದ ವಿವಿಗೆ ಮೂರು ದಿನಗಳ ರಜೆ ಘೋಷಿಸಿದ್ದೇವೆಂದು ಕುಲಸಚಿವ ಪ್ರೋ. ಶ್ರೀಕಾಂತ ಅವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
Advertisement
ನೀರಿನ ಕಾರಣ ಒಡ್ಡಿ ವಿವಿಗೆ ರಜೆ ನೀಡಿದ್ದು ತಪ್ಪು. ನೀರಿನ ಪರ್ಯಾಯ ವ್ಯವಸ್ಥೆ ಮಾಡುವುದನ್ನು ಬಿಟ್ಟು ರಜೆ ನೀಡಿರುವ ನಿರ್ಧಾರವನ್ನು ದಲಿತ ವಿದ್ಯಾರ್ಥಿ ಪರಿಷತ್ ಖಂಡಿಸಿ ವಿವಿಯ ಮುಂದೆ ಪ್ರತಿಭಟನೆ ಮಾಡಿದರು.