ಜಮ್ಮು-ಕಾಶ್ಮೀರದ ಅಖ್ನೂರಲ್ಲಿ ಸೇನಾ ವಾಹನದ ಮೇಲೆ ದಾಳಿ; ಮೂವರು ಉಗ್ರರನ್ನು ಸದೆಬಡಿದ ಸೇನಾಪಡೆ

Public TV
1 Min Read
jammu kashmir akhnoor encounter

ಶ್ರೀನಗರ: ಜಮ್ಮುವಿನ ಅಖ್ನೂರ್‌ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರನ್ನು ಉಗ್ರರನ್ನು ಭಾರತೀಯ ಸೇನಾಪಡೆ ಹೊಡೆದುರುಳಿಸಿದೆ.

ಮಂಗಳವಾರ ಬೆಳಗ್ಗೆ ತೀವ್ರವಾದ ಗುಂಡಿನ ಚಕಮಕಿಯು ನಮ್ಮ ಪಡೆಗಳಿಗೆ ಗಮನಾರ್ಹ ಜಯವನ್ನು ತಂದುಕೊಟ್ಟಿತು. ಪಟ್ಟುಬಿಡದ ಕಾರ್ಯಾಚರಣೆಗಳು ಮತ್ತು ಯುದ್ಧತಂತ್ರದ ಶ್ರೇಷ್ಠತೆಯು ಮೂವರು ಭಯೋತ್ಪಾದಕರ ಸದೆಬಡಿಯಲು ಕಾರಣವಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಸುಂದರ್‌ಬನಿ ಸೆಕ್ಟರ್‌ನ ಅಸಾನ್‌ನಲ್ಲಿ ಉಗ್ರರು ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದಾಗ ಎನ್‌ಕೌಂಟರ್ ಪ್ರಾರಂಭವಾಯಿತು. ತಕ್ಷಣವೇ ಪ್ರದೇಶವನ್ನು ಸುತ್ತುವರಿಯಲಾಯಿತು. ಉಗ್ರರನ್ನು ಸದೆಬಡಿಯಲು ಎನ್‌ಎಸ್‌ಜಿ ಕಮಾಂಡೋಗಳ ವಿಶೇಷ ತಂಡ ಕೂಡ ಭದ್ರತಾ ಪಡೆಗಳೊಂದಿಗೆ ಸೇರಿಕೊಂಡಿದೆ.

ಎನ್‌ಕೌಂಟರ್ ಸ್ಥಳದಲ್ಲಿ ಭದ್ರತಾ ಪಡೆಗಳಿಂದ APC ‘ಶರತ್’ ಎಂದೂ ಕರೆಯಲ್ಪಡುವ ಪದಾತಿಸೈನ್ಯದ ಯುದ್ಧ ವಾಹನವಾದ BMP-II ಅನ್ನು ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದ್ದು, ಎನ್‌ಕೌಂಟರ್ ಸ್ಥಳದಿಂದ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಈ ತಿಂಗಳು ಉಗ್ರರಿಂದ ನಾಲ್ಕು ದಾಳಿಗಳು ನಡೆದಿದೆ. ದಾಳಿಗೆ 10 ಮಂದಿ ನಾಗರಿಕರು ಬಲಿಯಾಗಿದ್ದಾರೆ. ಅಲ್ಲದೇ, ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

Share This Article