ಲಕ್ನೋ: ನೀತಿ ಆಯೋಗದ ಬಡತನ ಸೂಚ್ಯಂಕದ ವರದಿಯಲ್ಲಿ ಉತ್ತರಪ್ರದೇಶ ಕೆಳಗಿನ ಮೂರನೇ ರಾಜ್ಯಗಳಲ್ಲಿದೆ ಎಂದು ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದರು.
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಬಿಜೆಪಿ ಆಡಳಿತದಲ್ಲಿ ನೀತಿ ಆಯೋಗದ ಮೊದಲ ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಉತ್ತರ ಪ್ರದೇಶ ಮೂರು ಬಡ ರಾಜ್ಯಗಳಲ್ಲಿ ಒಂದಾಗಿದೆ. ಅತ್ಯಧಿಕ ಅಪೌಷ್ಟಿಕತೆಯ ದರದಲ್ಲಿ ಉತ್ತರಪ್ರದೇಶವು ಮೂರನೇ ಸ್ಥಾನದಲ್ಲಿದೆ ಎಂದು ಕಿಡಿಕಾರಿದರು.
Advertisement
भाजपा के राज में नीति आयोग के प्रथम बहुआयामी ग़रीबी सूचकांक MPI में उप्र देश के सबसे ग़रीब तीन राज्यों में शामिल है; सबसे अधिक कुपोषण में उप्र तीसरे स्थान पर है तथा बाल व किशोर मृत्यु दर श्रेणी में पूरे देश में उप्र सबसे ख़राब स्थिति में है।
ये भाजपा सरकार की नाकामी के तमगे हैं। pic.twitter.com/zgnZJEkFB0
— Akhilesh Yadav (@yadavakhilesh) March 21, 2022
ಮಕ್ಕಳ ಹಾಗೂ ಹದಿಹರೆಯದವರ ಮರಣದ ದರ ಉತ್ತರಪ್ರದೇಶದ ಇಡೀ ದೇಶದಲ್ಲಿ ಅತ್ಯಂತ ಕೆಟ್ಟ ಸ್ಥಾನದಲ್ಲಿದೆ. ಇವು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಬಹು ಮುಖ್ಯ ಸಾಕ್ಷಿಯಾಗಿದೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ. ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡದೇ ಶುಲ್ಕ ವಿಧಿಸಿದ ಸರ್ಕಾರ – ರೈತರು ಕಂಗಾಲು
Advertisement
ಈ ವರದಿಗೆ ಸಂಬಂಧಿಸಿದಂತೆ ಪತ್ರಿಕೆಯೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸೂಚ್ಯಂಕದ ಪ್ರಕಾರ ಬಿಹಾರದ ಶೇ 51.91 ರಷ್ಟು ಜನರು ಬಡವರಾಗಿದ್ದಾರೆ. ಈ ಪ್ರಮಾಣವು ಜಾರ್ಖಂಡ್‍ನಲ್ಲಿ ಶೇ 42.16 ಮತ್ತು ಉತ್ತರ ಪ್ರದೇಶದಲ್ಲಿ ಶೇ 37.79 ರಷ್ಟಿದೆ. ದೇಶಪ್ರೇಮ ಸಾರುವ ಟ್ಯಾಟೂಗಳಿಗೆ ಉಕ್ರೇನ್‍ನಲ್ಲಿ ಸಖತ್ ಡಿಮ್ಯಾಂಡ್