ಲಕ್ನೋ: ಮುಸ್ಲಿಮರನ್ನು ಓಲೈಸಲು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತಾಂತರ ಆಗಬಹುದು ಎಂದು ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಟೀಕಿಸಿದ್ದಾರೆ.
ಅಖಿಲೇಶ್ ಅವರು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)ನೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಅವರು ನೆರೆಯ ದೇಶದ ಐಎಸ್‌ಐನಿಂದ ಆರ್ಥಿಕ ಬೆಂಬಲ ಪಡೆಯುತ್ತಿರಬಹುದು ಎಂದು ಸಚಿವರು ಆರೋಪಿಸಿದ್ದಾರೆ.
Advertisement
Advertisement
“ಇಸ್ಲಾಮಿಕ್ ಜಗತ್ತಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸವಾಲು ಹಾಕಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಸ್ಲಾಮಿನವರಿಂದ ಬೆಂಬಲ ಪಡೆದಿದ್ದಾರೆ. ಅಲ್ಲದೇ ಆರ್ಥಿಕ ಬೆಂಬಲವನ್ನೂ ಪಡೆಯುತ್ತಿರಬಹುದು” ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ
Advertisement
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಜವಾಹರಲಾಲ್ ನೆಹರೂ, ಮೊಹಮ್ಮದ್ ಆಲಿ ಜಿನ್ನಾ ಅವರೆಲ್ಲ ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ್ದಾರೆ ಅಜಿತ್ ಪವಾರ್ ಹೇಳಿಕೆ ನೀಡಿದ್ದರು.
Advertisement
ಮುಸಲ್ಮಾನರನ್ನು ಸೆಳೆಯಲು ಯಾದವ್ ಅವರು ನಮಾಜ್ ಮಾಡಿ, ಉಪವಾಸ ಆಚರಿಸಿದರು. ಹಾಗೆಯೇ ಅವರ ಮತಗಳನ್ನು ಪಡೆಯಲು ಅವರು ಮತಾಂತರ ಆಗಬಹುದು ಎಂದು ಸಚಿವ ಆನಂದ್ ಟೀಕಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಉತ್ತುಂಗದಲ್ಲಿದೆ, ಇದು ತಮಾಷೆಯ ವಿಚಾರವಲ್ಲ: ರಾಹುಲ್ ಗಾಂಧಿ
ಐಎಸ್‌ಐ ನಿರ್ದೇಶನದ ಮೇರೆಗೆ ಯಾದವ್ ಜಿನ್ನಾರನ್ನು ವೈಭವೀಕರಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ತಾಲಿಬಾನ್‌ಗೆ ಬೇಕಾಗುವಂತೆ ಯಾದವ್ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಶುಕ್ಲಾ ಆರೋಪಿಸಿದ್ದರು.