ಉಪಯೋಗಿ ಅಲ್ಲ, ನಿರುಪಯೋಗಿ: ಮೋದಿ ಬಣ್ಣನೆಗೆ ಅಖಿಲೇಶ್‌ ಯಾದವ್‌ ಲೇವಡಿ

Advertisements

ಲಕ್ನೋ: ಯುಪಿ+ಯೋಗಿ, ಉಪಯೋಗಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರನ್ನು ಬಣ್ಣಿಸಿದ್ದ ಪ್ರಧಾನಿ ಮೋದಿ ಅವರಿಗೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌ ತಿರುಗೇಟು ನೀಡಿದ್ದಾರೆ. ಉಪಯೋಗಿ ಅಲ್ಲ ನಿರುಪಯೋಗಿ ಎಂದು ಟೀಕಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರುಪಯೋಗಿ ಬಿಜೆಪಿ ಸರ್ಕಾರದಿಂದ ಏನನ್ನೂ ನಿರೀಕ್ಷಿಸಬೇಡಿ. ಬಿಜೆಪಿ ವಾಟ್ಸಪ್‌ ಯೂನಿರ್ವಸಿಟಿಗೆ ಮಾತ್ರ ಸೀಮಿತವಾಗಿದೆ ಎಂದು ಯಾದವ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದ ಉದ್ದದ ಎಕ್ಸ್‌ಪ್ರೆಸ್‌ವೇಗೆ ಮೋದಿ ಶಂಕುಸ್ಥಾಪನೆ

Advertisements

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಬರೆದಿದ್ದ ಸ್ಕ್ರಿಪ್ಟ್‌ನಡಿ ಬಿಜೆಪಿ ಕೆಲಸ ಮಾಡುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯಲ್ಲಿ ಇಂತಹ ತಂತ್ರಗಳು ಹೆಚ್ಚುತ್ತಿವೆ ಎಂದು ಕಿಡಿಕಾರಿದ್ದಾರೆ.

ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ನಿರ್ಮಾಣವಾಗುತ್ತಿರುವ 594 ಕಿ.ಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಯುಪಿ+ಯೋಗಿ, ಉಪಯೋಗಿ ಎಂದು ಯೋಗಿ ಆದಿತ್ಯನಾಥ್‌ ಅವರನ್ನು ಹಾಡಿ ಹೊಗಳಿದ್ದರು. ಇದನ್ನೂ ಓದಿ: 7 ವರ್ಷದಲ್ಲಿ ಅವರೇನು ಮಾಡಿದ್ದಾರೆ? – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

Advertisements

Advertisements
Exit mobile version