ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ

Public TV
2 Min Read
Akhilesh Yadav

ಲಕ್ನೋ: ಡೆಂಗ್ಯೂ ಹಾಗೂ ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸುವಲ್ಲಿ ಉತ್ತರ ಪ್ರದೇಶದ ಸರ್ಕಾರ ವಿಫಲವಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್  ವಾಗ್ದಾಳಿ ನಡೆಸಿದ್ದಾರೆ.

yogi adityanath

ಫಿರೋಜಾಬಾದ್‍ನಲ್ಲಿ ಮಾತನಾಡಿದ ಅವರು, ವೈರಲ್ ಫಿವರ್ ಹಾಗೂ ಡೆಂಗ್ಯೂ ಅತೀ ವೇಗವಾಗಿ ಎಲ್ಲೆಡೆ ಹರಡುತ್ತಿದೆ. ಇದರಿಂದಾಗಿ ಅನೇಕ ಚಿಕ್ಕ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಈ ರೋಗಗಳು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುವ ಹಳ್ಳಿಗಳ ಪಟ್ಟಿಯನ್ನು ತಮ್ಮ ಕಾರ್ಯಕರ್ತರು ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಆರೋಗ್ಯ ವ್ಯವಸ್ಥೆಗಳನ್ನು ತಕ್ಷಣ ಸುಧಾರಣೆಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಕರ ಸುಲಿಗೆ – ಹಬ್ಬದ ಸೀಸನ್‍ನಲ್ಲಿ ಸಾರಿಗೆ ದಂಧೆ ಬಯಲು

Akhilesh Yadav

ಕೊರೊನಾ ಸಂಕಷ್ಟದ ಸಮಯದಲ್ಲಿ ಆರೋಗ್ಯ ವ್ಯವಸ್ಥೆ ಹೇಗೆ ಕುಗ್ಗಿತ್ತು ಎಂದು ಎಲ್ಲರೂ ನೋಡಿದ್ದಾರೆ. ಹಾಗಾಗಿ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಭರವಸೆ ಇಲ್ಲ. ಆದರೆ ಇದೀಗ ಫಿರೋಜಾಬಾದ್‍ನಲ್ಲಿ ಡೆಂಗ್ಯೂ ಮತ್ತು ವೈರಲ್ ಫಿವರ್‌ನಿಂದ ಸಾಯುತ್ತಿರುವ ಮಕ್ಕಳನ್ನು ರಕ್ಷಿಸುವಂತೆ ಸರ್ಕಾರಕ್ಕೆ ಪ್ರತಿಯೊಬ್ಬರ ಕಡೆಯಿಂದ ಮನವಿ ಮಾಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಒಟ್ಟಾಗಿ ಹೋಗೋಣವೆಂದು ಹೆಚ್‍ಡಿಕೆಗೆ ಹೇಳಿದ್ದೇನೆ: ಮೈತ್ರಿ ಬಗ್ಗೆ ಸಿಎಂ ಸ್ಪಷ್ಟನೆ

ಇದೇ ವೇಳೆ ಮುಜಾಫರ್ ನಗರದಲ್ಲಿ ರೈತರ ರ್‍ಯಾಲಿ ಕುರಿತಂತೆ ಮಾತನಾಡಿದ ಅವರು, ಈಗ ರೈತರು ಒಗ್ಗಟ್ಟಾಗಿದ್ದಾರೆ. ಬಿಜೆಪಿ ಸರ್ಕಾರ ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. ಬಿಜೆಪಿ ಸರ್ಕಾರವು ರೈತರ ಆದಾಯವನ್ನು ಎರಡರಷ್ಟು ಗೊಳಿಸುವುದಾಗಿ ಆಸೆ ತೋರಿಸಿತು. ಆದರೆ ಹಣದುಬ್ಬರ ಮಾತ್ರ ದ್ವಿಗುಣಗೊಂಡಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *