ಲಕ್ನೋ: ಅಂಗವಿಕಲ ಹಿರಿಯ ನಾಗರಿಕರೊಬ್ಬರಿಗೆ ಬಲವಂತವಾಗಿ ಬಿಜೆಪಿಗೆ ಮತ ಹಾಕಿಸಿದ ಆರೋಪ ಹೊತ್ತಿರುವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಅತ್ಯಂತ ಗಂಭೀರ ವಿಚಾರ ಇದಾಗಿದೆ. ಆ ಅಧಿಕಾರಿಯನ್ನು ಆಯೋಗವು ಅಮಾನತು ಮಾಡ ಬೇಕು. ಅಂತಹ ಅಧಿಕಾರಿಗಳನ್ನು ಆಯೋಗವು ಗುರುತಿಸಬೇಕು ಮತ್ತು ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಅಖಿಲೇಶ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಈ ಘಟನೆ ಕುರಿತಾದ ಒಂದು ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Advertisement
Advertisement
ವೀಡಿಯೋದಲ್ಲಿ ಏನಿದೆ?: ಬಿಜೆಪಿಗೆ ಮತ ಹಾಕುವಂತೆ ಅಧಿಕಾರಿಗಳು ಬಲವಂತ ಮಾಡಿದ್ದಾರೆ ಎಂದು ಆಗ್ರಾದ ಫತೇಹಾಬಾದ್ ನಿವಾಸಿ 80 ವರ್ಷದ ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಗ್ರಾಮದ ಜನರು ಧಾವಿಸಿ ಬಂದು ಅಧಿಕಾರಿಗಳ ಮುಂದೆ ದಾಂದಲೆ ನಡೆಸಿದ್ದರು. ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್
Advertisement
Advertisement
ಅಲ್ಲಿಗೆ ಬಂದಿದ್ದ ಹಿರಿಯ ಅಧಿಕಾರಿಯೊಬ್ಬರು ಒಂದು ಮತದಿಂದ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳಿದ್ದಾರೆ. ಬಲವಂತದಿಂದ ಮತ ಹಾಕಿಸಿದ ಬಗ್ಗೆ ಗ್ರಾಮದ ಜನರು ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದ ದೃಶ್ಯಗಳೂ ವೀಡಿಯೋದಲ್ಲಿದೆ. ಅಂಗವಿಕಲರು ಮತ್ತು ಹಿರಿಯ ನಾಗರಿಕರು ಅಂಚೆ ಮೂಲಕ ಮತ ಚಲಾಯಿಸುವ ಪ್ರಕ್ರಿಯೆ ಆಗ್ರಾದಲ್ಲಿ ಭಾನುವಾರ ಆರಂಭಗೊಂಡಿದೆ. ಇದನ್ನೂ ಓದಿ: ಧಮ್ ಇದ್ರೆ ಮಸೀದಿಗೆ ಮುಸ್ಲಿಂ ಮಹಿಳೆಗೆ ಪ್ರವೇಶ ಕೊಡಿಸಿ- ಶಾಸಕಿಗೆ ಈಶ್ವರಪ್ಪ ಸವಾಲು