-ಮಹಾಘಟಬಂಧನ್ ದಿಂದ ಹೊರಬಂದು ಕಾಂಗ್ರೆಸ್‍ಗೆ ಶಾಕ್ ಕೊಟ್ಟ ಎಸ್‍ಪಿ-ಬಿಎಸ್‍ಪಿ
-80 ಕ್ಷೇತ್ರಗಳಲ್ಲಿ 38-38ರಂತೆ ಹಂಚಿಕೆ
ಲಕ್ನೋ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‍ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ(ಬಿಎಸ್‍ಪಿ) 26 ವರ್ಷಗಳ ಬಳಿಕ ಮೈತ್ರಿ ರಚಿಸಿಕೊಂಡಿವೆ. ಈ ಮೂಲಕ ಕಾಂಗ್ರೆಸ್ ನಿಂದ ಹೊರ ಬಂದಿರುವ ಪ್ರಾದೇಶಿಕ ಪಕ್ಷಗಳು ಮಹಾಘಟಬಂಧನ್‍ಗೆ ಶಾಕ್ ನೀಡಿವೆ. ಇದೇ ಮೈತ್ರಿಯನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಂದುವರಿಸುವುದಾಗಿ ಎರಡು ಪಕ್ಷಗಳೂ ಹೇಳಿಕೊಂಡಿವೆ.
Advertisement
ಇಂದು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಎಸ್‍ಪಿ ಮುಖ್ಯಸ್ಥೆ ಮಯಾವತಿ, ಚುನಾವಣೆಯ ಮೈತ್ರಿ ಬಗ್ಗೆ ಹೇಳಿಕೊಂಡರು. ಉತ್ತರ ಪ್ರದೇಶದ ಒಟ್ಟು 80 ಕ್ಷೇತ್ರಗಳಲ್ಲಿ ನಾವು 38-38ರಂತೆ ಕ್ಷೇತ್ರಗಳನ್ನು ಹಂಚಿಕೊಂಡಿದ್ದೇವೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಅಮೇಥಿ ಮತ್ತು ಕಾಂಗ್ರೆಸ್ ಅಧಿನಾಯಕಿ ಸ್ಪರ್ಧಿಸುವ ರಾಯ್‍ಬರೇಲಿ ಕ್ಷೇತ್ರದಲ್ಲಿ ಎಸ್‍ಪಿ ಮತ್ತು ಬಿಎಸ್‍ಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲ್ಲ. ಉಳಿದೆರೆಡು ಕ್ಷೇತ್ರಗಳಲ್ಲಿ ರಾಜ್ಯದ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಲಾಗುವುದು ಎಂದು ಮಯಾವತಿ ತಿಳಿಸಿದರು.
Advertisement
Advertisement
ಮೈತ್ರಿ ಯಾಕೆ?
ನಮ್ಮ ಈ ಸುದಿಗೋಷ್ಠಿ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಬ್ಬರ ನಿದ್ದೆಯನ್ನು ಕೆಡಿಸಲಿದೆ ಎಂದು ಹೇಳುತ್ತಲೇ ಮಾಯಾವತಿ ತಮ್ಮ ಮಾತು ಆರಂಭಿಸಿದರು. 1990ರಿಂದ ಬಿಜೆಪಿಯ ಜಾತಿವಾದಿ, ಸಂಪ್ರದಾಯಿಕ ನೀತಿಗಳಲ್ಲಿ ರಾಜಕೀಯ ತಂದಿದ್ದು, ಅಯೋಧ್ಯೆ ವಿಚಾರದಲ್ಲಿ ರಾಜಕಾರಣ ಮಾಡುತ್ತಿರೋದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಈ ಹಿಂದೆ ಚುನಾವಣೆಗೂ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸಲು ಬಿಜೆಪಿ ವಿಫಲವಾಗಿದೆ. ರೈತ ವಿರೋಧಿ ನೀತಿ, ಬಿಜೆಪಿ ಸರ್ವಾಧಿಕಾರತ್ವವವನ್ನು ಶಮನಗೊಳಿಸಲು ಇಂದು ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಸ್‍ಪಿ ಮತ್ತು ಬಿಎಸ್‍ಪಿ ಒಂದಾಗಿದೆ ಎಂದು ತಿಳಿಸಿದರು.
Advertisement
Akhilesh Yadav on if he will support Mayawati for PM: You know who is my choice. Uttar Pradesh has given Prime Ministers in the past and trend will be repeated again pic.twitter.com/LzHs9Ijn6e
— ANI (@ANI) January 12, 2019
Akhilesh Yadav: To defeat the arrogance of BJP, it was necessary for BSP and SP to come together. BJP can go to any extent to create differences in our workers, we must be united and counter any such tactic #SPBSPAlliance pic.twitter.com/dBrMOMmI4i
— ANI (@ANI) January 12, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv