ಹಾವೇರಿ: ಕೊರೊನಾ ಮಾರ್ಗಸೂಚಿಗಳು ಹೋದ ಮೇಲೆ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ತಿಳಿಸಿದರು.
ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಮಾತನಾಡಿದ ಅವರು, ಸಮ್ಮೇಳನ ನಡೆಸೋ ಸಂಬಂಧ ಈಗಾಗಲೇ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಸಿಎಂ ಮತ್ತು ನಾನು ಹಾವೇರಿ ಜಿಲ್ಲೆಯವರೇ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸೋಕೆ ನನಗೂ ಸಾವಿರಪಟ್ಟು ಆಸಕ್ತಿ ಇದೆ ಎಂದು ಹೇಳಿದರು.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಐತಿಹಾಸಿಕ ಸಮ್ಮೇಳನ ಮಾಡಲಾಗುವುದು. ಜಿ.ಎಸ್.ಶಿವರುದ್ರಪ್ಪ ನಂತರ ರಾಷ್ಟ್ರಕವಿಗಳ ಆಯ್ಕೆಯಾಗಿಲ್ಲ. ಇಷ್ಟೊತ್ತಿಗಾಗಲೆ ರಾಷ್ಟ್ರಕವಿಗಳ ಆಯ್ಕೆ ಆಗಬೇಕಿತ್ತು. ಚೆಂಬಳಕಿನ ಕವಿ ಡಾ.ಚನ್ನವೀರ ಕಣವಿ ಅವರು ರಾಷ್ಟ್ರಕವಿ ಆಗಬೇಕು. ಅವರ ಆರೋಗ್ಯ ಸರಿ ಇದ್ದಾಗಲೆ ಕೊಡಬೇಕಿತ್ತು. ಈಗ ಕೊನೆ ಗಳಿಗೆಯಲ್ಲಿ ಅವರಿಗೆ ದೊಡ್ಡ ಗೌರವ ಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಬಿಜೆಪಿಯನ್ನ ಬಿಡಿ, ನಿಮ್ಮ ಮನೆಯಲ್ಲಿ ಎಷ್ಟು ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ: HDKಗೆ ಅಶ್ವಥ್ ಟಾಂಗ್
ಹಿಜಾಬ್ ವರ್ಸಸ್ ಕೇಸರಿ ಪ್ರಕರಣವು ಕೋರ್ಟ್‍ನಲ್ಲಿದೆ. ಕೋರ್ಟ್ ಹೇಳಿದ್ದನ್ನ ಎಲ್ಲರೂ ಪಾಲಿಸಲೇಬೇಕು. ಕೋರ್ಟ್ ತೀರ್ಪಿಗೆ ವಿರೋಧ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.