ಕಲಬುರಗಿ: ನಗರದಲ್ಲಿ 2020ರ ಫೆಬ್ರುವರಿ 5, 6 ಹಾಗೂ 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವಂತೆ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಕೋಶಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಬಿ. ಶರತ್ ಅವರು, ಸಮ್ಮೇಳನವು ಈ ಹಿಂದೆ 1987ರಲ್ಲಿ ಜರುಗಿತ್ತು. ಇದೀಗ 32 ವರ್ಷಗಳ ನಂತರ ಕಲಬುರಗಿಯಲ್ಲಿ ಕನ್ನಡ ಹಬ್ಬ ಆಯೋಜಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಯಶಸ್ವಿಯಾಗಿ ನಡೆಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ. ಅದರಲ್ಲಿ ತಮ್ಮ ಪಾಲುದಾರಿಕೆ ಅತೀ ಶ್ರೇಷ್ಠವಾದದ್ದು. ಅದರಂತೆ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನದ ಅವಶ್ಯಕತೆ ಇರುತ್ತದೆ. ಸಂಘ-ಸಂಸ್ಥೆಗಳು,ಸರ್ಕಾರೇತರ ಸಂಸ್ಥೆಗಳು, ಕಾರ್ಖಾನೆ-ಉದ್ದಿಮೆಗಳು, ವಿವಿಧ ವ್ಯಾಪಾರಿ ಸಂಘಗಳು ಮುಂತಾದವರು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕೆಂದು ಕೋರಿದ್ದಾರೆ.
ಎಲ್ಲಾ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಕೈಜೋಡಿಸುವಂತೆ ಅವರು ಕೋರಿದ್ದಾರೆ. ದೇಣಿಗೆ ನೀಡಲಿಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಹಣ ವರ್ಗಾಯಿಸಬಹುದಾಗಿದೆ. ಚೆಕ್ ಅಥವಾ ಡಿ.ಡಿ. ಮೂಲಕವೂ ಸಹ ದೇಣಿಗೆ ನೀಡಬಹುದಾಗಿದೆ. ಚೆಕ್ ಮೂಲಕ ದೇಣಿಗೆ ನೀಡಬಯಸುವವರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಚೆಕ್ ನೀಡಬಹುದಾಗಿದೆ.
ಬ್ಯಾಂಕ್ ಖಾತೆ ವಿವರ
ಬ್ಯಾಂಕ್ ಖಾತೆ ಹೆಸರು- 85TH ABKSSSK
ಬ್ಯಾಂಕಿನ ಹೆಸರು-ಸಿಂಡಿಕೇಟ್ ಬ್ಯಾಂಕ್
ಶಾಖೆ ಹೆಸರು-ಸ್ಟೇಷನ್ ಬಜಾರ, ತಿಮ್ಮಾಪುರಿ ಚೌಕ್, ಕಲಬುರಗಿ
ಖಾತೆ ಸಂಖ್ಯೆ-13012010153869
ಐ.ಎಫ್.ಎಸ್.ಸಿ. ಕೋಡ್- SYNB0001301
ಎಂ.ಐ.ಸಿ.ಆರ್. ಸಂಖ್ಯೆ-585025003