ಪಾಕ್‌ ಕ್ಷಿಪಣಿಯನ್ನು ಧ್ವಂಸಗೊಳಿಸಿದ್ದ AI ಆಧಾರಿತ ಆಕಾಶ್‌ತೀರ್

Public TV
1 Min Read
bharat electronics Akashteer

ನವದೆಹಲಿ: ಪಾಕಿಸ್ತಾನ (Pakistan) ಪತರುಗುಟ್ಟುವಂತೆ ಮಾಡುವಲ್ಲಿ ಭಾರತ (India) ಸೇನೆ ಬಳಸಿದ ಶಸ್ತ್ರಾಸ್ತ್ರಗಳಲ್ಲಿ ಆಕಾಶ್‌ತೀರ್ (AkashTeer) ಕೂಡ ಸೇರ್ಪಡೆಯಾಗಿದೆ.

ಭಾರತದ 26 ನಗರಗಳನ್ನು ಟಾರ್ಗೆಟ್ ಮಾಡಿ ಬಂದಿದ್ದ ಪಾಕಿಸ್ಥಾನದ ಡ್ರೋನ್, ಮಿಸೈಲ್‌ಗಳನ್ನು ಆಕಾಶದಲ್ಲೇ ಧ್ವಂಸಗೊಳಿಸಿದೆ. ಈ ಆಕಾಶ್‌ತೀರ್ ಅಸ್ತ್ರದ ಬಗ್ಗೆ ಭಾರತ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (BEL) ಹೆಮ್ಮೆಯಿಂದ ಹೇಳಿಕೊಂಡಿದೆ. ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

ಇದು ಭಾರತದ ಸ್ವಂತ `ಐರನ್ ಡೋಮ್’ ಆಗಿದ್ದು ಎಐ ಪವರ್ ಹೊಂದಿರುವ ಏರ್‌ಡಿಫೆನ್ಸ್ ಸಿಸ್ಟಮ್ ಆಗಿರುವುದು ವಿಶೇಷ. ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ(DRDO) ಮತ್ತು ಇಸ್ರೋ (ISRO) ನೆರವಿನಿಂದ ಬಿಇಎಲ್‌ ಆಕಾಶ್‌ತೀರ್ ಅಭಿವೃದ್ಧಿ ಪಡಿಸಿದೆ.  ಇದನ್ನೂ ಓದಿ: ಚೀನಿ ಏರ್‌ ಡಿಫೆನ್ಸ್‌ ಜಾಮ್‌ ಮಾಡಿ 23 ನಿಮಿಷದಲ್ಲಿ ಮುಗಿಯಿತು ಕಾರ್ಯಾಚರಣೆ – ಭಾರತದ ದಾಳಿಯ ರೋಚಕ ಕಥೆ ಓದಿ

ಪಾಕ್ ಡ್ರೋನ್, ಮಿಸೈಲ್, ಯುಎವಿಗಳು(ಮಾನವರಹಿತ ವಿಮಾನ) ಭಾರತದ ವಾಯುಪ್ರದೇಶಕ್ಕೆ ಶತ್ರು ನುಗ್ಗದಂತೆ ತಡೆದಿದೆ. ಇವು ಕಂಟ್ರೋಲ್ ರೂಮ್, ರೇಡಾರ್, ಏರ್‌ ಡಿಫೆನ್ಸ್ ಗನ್‌ಗಳ ಸ್ಪಷ್ಟ ಚಿತ್ರಣ ರವಾನಿಸುತ್ತದೆ. ಇಸ್ರೋ ಸ್ಯಾಟಲೈಟ್, ನಾವಿಕ್ ಜಿಪಿಎಸ್ ಜೊತೆ ಇದು ಕೆಲಸ ಮಾಡುತ್ತಾ ನಿಖರವಾಗಿ ದಾಳಿಗಳನ್ನು ಧ್ವಂಸ ಮಾಡಿದೆ.

Share This Article