ಕನ್ನಡದ ‘ಆಕಾಶದೀಪ’ (Akashadeepa) ಸೀರಿಯಲ್ ನಾಯಕಿ ದಿವ್ಯಾ ಶ್ರೀಧರ್ (Divya Shridhar) ಅವರು ಪತಿ ಅರ್ನವ್ ಕಿರುಕುಳ ವಿರುದ್ಧ ತಿರುಗಿ ಬಿದ್ದಿದ್ದರು. ಕಳೆದ ವರ್ಷ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್‌ನ ಬಂಧಿಸಿದ್ದರು. ಈ ಕಹಿ ಘಟನೆಯ ಬೆನ್ನಲ್ಲೇ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ (Baby Girl) ಜನ್ಮ ನೀಡಿದ್ದಾರೆ. ತಾಯಿ- ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ.
ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕಿರುತೆರೆ ನಟ ಅರ್ನವ್ ಬಂಧನವಾಗಿತ್ತು. ಕಳೆದ ವರ್ಷ ಈ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ಇದೀಗ ಮುದ್ದು ಮಗಳ ಆಗಮನದ ಬಗ್ಗೆ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೋಮಲ್ ನಟನೆಯ ‘ಉಂಡೆನಾಮ’ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜಗ್ಗೇಶ್
ಮುದ್ದು ಮಗಳ ಕೈ ಹಿಡಿದು ಕ್ಲಿಕ್ಕಿಸಿರುವ ಫೋಟೊ ಹಾಕಿ ದಿವ್ಯಾ, ಈ ಕಾಯುವಿಕೆ ಬಹಳ ವಿಶೇಷವಾದದ್ದು. ಈ ಹಿಂದೆ ಏನು ನಡೆದಿತ್ತು ಎನ್ನುವುದಕ್ಕಿಂತ ಇನ್ನು ಮುಂದೆ ಏನು ಆಗುತ್ತದೆ ಎನ್ನುವುದು ಮುಖ್ಯ. ನೀನು ನನಗೆ ಪ್ರೀತಿ, ಬಲ, ಬೆಂಬಲ ಎನ್ನವನ್ನು ಕೇಳುವುದಕ್ಕೂ ಮೊದಲೇ ಕೊಟ್ಟಿದ್ದೀಯಾ. ನನ್ನ ಭಾಗವಾಗಿದ್ದಕ್ಕೆ ನಿನಗೆ ಕೃತಜ್ಞತೆಗಳು. ಎಂದೆಂದಿಗೂ ನಾನು ನಿನ್ನವಳೇ ಎಂದು ಮಾತು ಕೊಡುತ್ತಿದ್ದೇನೆ. ಎಂದೆಂದು ನಿನ್ನೊಟ್ಟಿಗೆ ನಾನು ಇರುತ್ತೇನೆ. ನನ್ನ ಮುದ್ದು ಕಂದ. ಲವ್ ಯು ಡಾರ್ಲಿಂಗ್. ಈ ಹಾದಿನಲ್ಲಿ ನನ್ನೊಟ್ಟಿಗೆ ನಿಂತ ಎಲ್ಲರಿಗೂ ಧನ್ಯವಾದ ಎಂದು ನಟಿ ಬರೆದುಕೊಂಡಿದ್ದಾರೆ.
View this post on Instagram
‘ಆಕಾಶದೀಪ’ ಸೀರಿಯಲ್ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಸೇವಂತಿ’ ಧಾರಾವಾಹಿ ಮೂಲಕ ತಮಿಳು ಕಿರುತೆರೆಗೆ ದಿವ್ಯಾ ಶ್ರೀಧರ್ ಕಾಲಿಟ್ಟರು.