ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai Airport) ಆಕಾಸ ಏರ್ ವಿಮಾನಕ್ಕೆ (Akasa Air Plane) ಸರಕು ಸಾಗಾಣಿಕೆಯ ಟ್ರಕ್ (Truck) ಡಿಕ್ಕಿ ಹೊಡೆದಿದೆ.
Akasa Air plane hit by a ground handling service provider truck at Mumbai Airport.
Akasa Air says :
“A third party ground handler, while operating a cargo truck, came in contact with an Akasa Air aircraft that was parked at Chhatrapati Shivaji Maharaj International Airport,… pic.twitter.com/hllglEXWO1
— Sameer Dixit (@sameerdixit16) July 14, 2025
ವಿಮಾನವನ್ನು ನಿಲ್ದಾಣದಲ್ಲಿ ನಿಲ್ಲಿಸಿದ್ದ ವೇಳೆ ಟ್ರಕ್ ಹಿಂಭಾಗದ ರೆಕ್ಕೆಗಳಿಗೆ ಡಿಕ್ಕಿಯಾಗಿದೆ. ವಿಮಾನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ಘಟನೆಗೆ ಕಾರಣನಾದ ವ್ಯಕ್ತಿಯ ವಿರುದ್ಧ ತನಿಖೆ ನಡೆಸುತ್ತಿದ್ದೇವೆ ಎಂದು ಆಕಾಸ ಏರ್ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಫ್ಯುಯೆಲ್ ಸ್ವಿಚ್ ನಿರ್ವಹಿಸುವಾಗ ಜಾಗ್ರತೆ – ಪೈಲಟ್‍ಗಳಿಗೆ ಆದೇಶಿಸಿದ ಇತಿಹಾದ್ ಏರ್‌ಲೈನ್ಸ್
ವಿಮಾನಕ್ಕೆ ಆಗಿರುವ ಹಾನಿಯ ಪ್ರಮಾಣ ಮತ್ತು ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಮಾನಯಾನ ಸಂಸ್ಥೆ ಮತ್ತು ವಿಮಾನ ನಿಲ್ದಾಣದ ಸರಕು ಸಾಗಾಟ ನಿರ್ವಹಣಾ ಕಂಪನಿ ಜಂಟಿ ತನಿಖೆ ನಡೆಸುತ್ತಿವೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಕೇಸ್ | ರಾಹುಲ್, ಸೋನಿಯಾ ವಿರುದ್ಧದ ಆರೋಪ ಪರಿಗಣನೆ ಕುರಿತು ತೀರ್ಪು ಕಾಯ್ದಿರಿಸಿದ ದೆಹಲಿ ಕೋರ್ಟ್