ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದ ಬಿಗ್ ಬಾಸ್ 10 ಆವೃತ್ತಿಯ ಸ್ಪರ್ಧಿ ಆಕಾಂಕ್ಷ ಶರ್ಮಾ ಪ್ರಕರಣವನ್ನು ಕೈಬಿಟ್ಟಿದ್ದಾರೆ.
ಯುವಿ ಸೋದರನ ಪತ್ನಿಯಾಗಿರುವ ಅಕಾಂಕ್ಷ 2017ರಲ್ಲಿ ಯುವರಾಜ್ ಸಿಂಗ್ ಕುಟುಂಬ ಹಾಗು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಅಡಿ ಮಾನಸಿಕ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು.
Advertisement
Advertisement
ಅಕಾಂಕ್ಷರ ದೂರಿನಂತೆ ಗುರುಗ್ರಾಮದ ಪೊಲೀಸ್ ಯುವರಾಜ್ ಸಿಂಗ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಯುವರಾಜ್ ಜೊತೆಗೆ ಅವರ ತಾಯಿ ಶಬ್ಮಮ್, ಸಹೋದರ ಜೊರಾವರ್ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿತ್ತು. ಸದ್ಯ ದೂರು ಹಿಂಪಡೆದಿರುವ ಆಕಾಂಕ್ಷ, ಯುವಿ ಕುಟುಂಬದ ಕ್ಷಮೆಯಾಚಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜೊರಾವರ್ ಸಿಂಗ್, ಆಕಾಂಕ್ಷ ವಿವಾಹ ವಿಚ್ಛೇದನ ಪಡೆದಿದ್ದರು. ಈ ವೇಳೆ 48 ಲಕ್ಷ ರೂ. ಜೀವನಾಂಶ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
Advertisement
ಯುವಿ ಸೋದರ ಜೊರಾವರ್ 2014ರಲ್ಲಿ ಅಕಾಂಕ್ಷಾರನ್ನು ಮದುವೆಯಾಗಿದ್ದರು. ಆಕಾಂಕ್ಷ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ಭಾಗಿಯಾಗಿದ್ದರು. ಶೋದಲ್ಲಿಯೇ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದರು. ಅಲ್ಲದೇ ಯುವರಾಜ್ ಸಿಂಗ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಬಿಗ್ ಬಾಸ್ ಶೋದಿಂದ ಹೊರಬಂದ 4 ತಿಂಗಳಲ್ಲೇ ಮನೆ ಬಿಟ್ಟು ಹೊರ ಬಂದಿದ ಅವರು ಬಳಿಕ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
https://www.instagram.com/p/B1okzITAqnO/