ಜೈಪುರ: ಪ್ರವಾದಿ ಮೊಹಮದ್ ಪೈಗಂಬರರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾರ ಶಿರಚ್ಛೇದ ಮಾಡಿ ತಲೆಯನ್ನು ತಂದವರಿಗೆ ತನ್ನ ಮನೆಯನ್ನು ಬಹುಮಾನವಾಗಿ ನೀಡುವುದಾಗಿ ಘೋಷಿಸಿದ್ದ ಹಜರತ್ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿಯ ದರ್ಗಾದ ಖಾದಿಮ್ ಆಗಿರುವ ಸಲ್ಮಾನ್ ಚಿಸ್ತಿ ಎಂಬಾತನನ್ನು ಅಜ್ಮೀರ್ ಪೊಲೀಸರು ಬಂಧಿಸಿದ್ದಾರೆ.
Advertisement
ನೂಪೂರ್ ಶರ್ಮಾ ಶಿರಚ್ಛೇದ ಮಾಡಿ ತಲೆ ತಂದವರಿಗೆ ನನ್ನ ಮನೆಯನ್ನು ಬಹುಮಾನವಾಗಿ ನೀಡುತ್ತೇನೆ ಎಂದು ಸಲ್ಮಾನ್ ಚಿಸ್ತಿ ವೀಡಿಯೋ ಮಾಡಿ ಹರಿಬಿಟ್ಟಿದ್ದ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಜ್ಮೀರ್ ಪೊಲೀಸರು ವೀಡಿಯೋ ಆಧಾರದ ಮೇಲೆ ಸಲ್ಮಾನ್ ಚಿಸ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು ಬೆಳಗ್ಗೆ ಸಲ್ಮಾನ್ ಚಿಸ್ತಿಯನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ
Advertisement
https://twitter.com/SheetalPronamo/status/1544195234623410176
Advertisement
ನೂಪೂರ್ ಶರ್ಮಾ ಹೇಳಿಕೆ ಬಳಿಕ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಜೊತೆಗೆ ಆಕ್ರೋಶ ಭುಗಿಲೆದ್ದಿತ್ತು. ರಾಜಸ್ಥಾನದಲ್ಲಿ ಕೆಲ ದಿನಗಳ ಹಿಂದೆ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಎನ್ನುವ ಕಾರಣಕ್ಕೆ ಕನ್ಹಯ್ಯ ಲಾಲ್ ಎನ್ನುವ ವ್ಯಕ್ತಿಯನ್ನು ಹಾಡುಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ರಾಜಸ್ಥಾನದಲ್ಲಿ ತಾಲಿಬಾನಿ ರೀತಿಯ ಕೃತ್ಯ ನಡೆದ ಬೆನ್ನಲ್ಲೇ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಹಸನ್ ಚಿಸ್ತಿ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು
Advertisement
Rajasthan | Ajmer Police arrested Salman Chishti, Khadim of Ajmer Dargah last night for allegedly giving a provocative statement against suspended BJP leader Nupur Sharma: Additional Superintendent of Police, Vikas Sangwan pic.twitter.com/6U3WCjVar7
— ANI MP/CG/Rajasthan (@ANI_MP_CG_RJ) July 6, 2022
ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಹಲವು ಬೆದರಿಕೆ ವೀಡಿಯೋಗಳು ಬಂದಿದ್ದವು. ಈ ನಡುವೆ ನೂಪುರ್ ಶರ್ಮಾರನ್ನು ಬಂಧಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಇದೀಗ ಈ ಕುರಿತಾಗಿ ದೇಶದಲ್ಲಿ ಚರ್ಚೆ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ.
Live Tv
[brid partner=56869869 player=32851 video=960834 autoplay=true]