ಬೆಂಗಳೂರು: ಶಿಗ್ಗಾಂವಿ (Shiggaon) ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ನಾಮಪತ್ರ ವಾಪಸ್ ಪಡೆಯುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar) ತಿಳಿಸಿದ್ದಾರೆ.
ಈ ಬಗ್ಗೆ ಸಭೆ ಬಳಿಕ ಮಾತನಾಡಿದ ಅವರು, ಕಾರ್ಯಕರ್ತರ ಒತ್ತಾಯದ ಮೇರೆಗೆ ಅಜ್ಜಂಪೀರ್ ಖಾದ್ರಿ (Ajjampir Khadri) ಪಕ್ಷೇತರವಾಗಿ ನಾಮಿನೇಷನ್ ಹಾಕಿದ್ದಾರೆ. ಖಾದ್ರಿ ಅವರನ್ನ ನಾನೇ ಕಾಂಗ್ರೆಸ್ ಗೆ (Congress) ಕರೆದುಕೊಂಡು ಬಂದಿದ್ದೆ. ಕಳೆದ ಚುನಾವಣೆಯಲ್ಲಿ ಖಾದ್ರಿಗೆ ಟಿಕೆಟ್ ಕೊಡಬೇಕಿತ್ತು. ಈ ಬಾರಿಯೂ ಪಕ್ಷ ಪಠಾಣ್‌ಗೆ ಟಿಕೆಟ್ ಕೊಟ್ಟಿದೆ. ಖಾದ್ರಿ ಅವರಿಗೆ ನಾವು ಅಧಿಕಾರ ಕೊಡುತ್ತೇವೆ. ಖಾದ್ರಿ ಪ್ರಾಮಾಣಿಕ ವ್ಯಕ್ತಿ. ಸಿಎಂ ಕೂಡಾ ಮನವೊಲಿಕೆ ಮಾಡಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಈಗ ಏನು ಹೇಳುವುದಕ್ಕೆ ಆಗುವುದಿಲ್ಲ. 30ನೇ ತಾರೀಕಿನಂದು ವಾಪಸ್ ಪಡೆಯುತ್ತಾರೆ. ಅಭ್ಯರ್ಥಿ ಪರ ಕೆಲಸ ಮಾಡುತ್ತಾರೆ ಎಂದರು. ಇದನ್ನೂ ಓದಿ: ಕಾರವಾರ| ಗಾಂಜಾ ಜೊತೆ ನಿಷೇಧಿತ ಮಾದಕ ವಸ್ತು ವಶ; ನಾಲ್ವರ ಬಂಧನ
Advertisement
Advertisement
ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಮಾತನಾಡಿ, ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ, ಪ್ರಾಮಾಣಿಕ ಕಾರ್ಯಕರ್ತ. ಬೊಮ್ಮಾಯಿ ಮೇಲೆ ಕಡಿಮೆ ಅಂತರದಲ್ಲಿ ಸೋತಿದ್ದೆ. ನಾನು ಗೆದ್ದಿದ್ದರೆ ಬೊಮ್ಮಾಯಿ ಸಿಎಂ ಆಗುತ್ತಿರಲಿಲ್ಲ. ನಾನು ಜನತಾ ಪರಿವಾರದಲ್ಲಿ ಇದ್ದೆ. ನಮಗೆ ಪಕ್ಷ ಮುಖ್ಯ. ವ್ಯಕ್ತಿ ಮುಖ್ಯ ಅಲ್ಲ. ಸಿಎಂ ಸೇರಿ ಎಲ್ಲರು ರಕ್ಷಣೆ ಕೊಡೋ ಮಾತು ಹೇಳಿದ್ದಾರೆ. ಪಕ್ಷ ಗೆಲ್ಲಬೇಕು ಎಂದು ಹೇಳಿದ್ದಾರೆ. ನನಗೆ ಅನ್ಯಾಯ ಆಗಿದೆ ಅಂತ ಹೇಳಿದ್ದೇನೆ. ನಾನು ಕ್ಷೇತ್ರದ ಕಾರ್ಯಕರ್ತರಿಗೆ ತೊಂದರೆ ಕೋಡುವುದಕ್ಕೆ ಆಗುವುದಿಲ್ಲ. ಕಾರ್ಯಕರ್ತರ ಜೊತೆ ನಾಳೆ ಮಾತಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ
Advertisement