ಮ್ಯಾಡ್ರಿಡ್: ಸ್ಪೇನ್‌ನಲ್ಲಿ (Spain) ನಡೆದ ರೇಸ್‌ನಲ್ಲಿ (Car Race) ನಟ ಅಜಿತ್ ಕುಮಾರ್ (Ajith Kumar) ಅವರ ಕಾರು (Accident) ಅಪಘಾತಕ್ಕೀಡಾಗಿದೆ.
ಸ್ಪೇನ್‌ನ ವೇಲೆನ್ಸಿಯಾದಲ್ಲಿ ನಡೆದ ರೇಸ್‌ನಲ್ಲಿ ಅಜಿತ್ ಭಾಗವಹಿಸಿದ್ದರು. ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿ, ಹಲವಾರು ಬಾರಿ ಪಲ್ಟಿಯಾಗಿ ನಿಂತಿದೆ. ಈ ಅಪಘಾತದ ವೀಡಿಯೊವನ್ನು ಅಜಿತ್ ಅವರ ವ್ಯವಸ್ಥಾಪಕ ಸುರೇಶ್ ಚಂದ್ರ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋ ವೈರಲ್ ಆಗಿದ್ದು ಅವರ ಸುರಕ್ಷತೆಯ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
Advertisement
#Ajith was involved in an accident while racing, but reports confirm that he is safe, with only minor injuries. Defying all concerns, he walked away from the incident unscathed, reassuring fans with his resilience. pic.twitter.com/rgUzRtmWWh
— TrackTollywood (@TrackTwood) February 22, 2025
Advertisement
ರೇಸ್‌ನ 5ನೇ ಸುತ್ತಿನಲ್ಲಿ ಅಜಿತ್ ಕುಮಾರ್ ಅವರು 14 ನೇ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಯನ್ನು ಗಳಿಸಿದರು. 6 ನೇ ಸುತ್ತಿನಲ್ಲಿ ಎರಡು ಬಾರಿ ಕಾರು ಅಪಘಾತಕ್ಕೀಡಾಯಿತು. ಮೊದಲ ಬಾರಿಗೆ ಅಪಘಾತದ ಹೊರತಾಗಿಯೂ ಅವರು ಚೆನ್ನಾಗಿಯೇ ಇದ್ದರು. ಎರಡನೇ ಬಾರಿ ಮತ್ತೆ ಅಪಘಾತ ಸಂಭವಿಸಿದಾಗ ಅವರ ಕಾರು ಪಲ್ಟಿಯಾಯಿತು. ಬಳಿಕ ಮತ್ತೆ ಅವರು ರೇಸ್ ಮುಂದುವರಿಸಿದರು.
Advertisement
Advertisement
ಅಜಿತ್ ಅವರ ರೇಸಿಂಗ್ ವೃತ್ತಿಜೀವನದಲ್ಲಿ ಒಂದೇ ತಿಂಗಳಿನಲ್ಲಿ ನಡೆದ ಎರಡನೇ ಪ್ರಮುಖ ಅಪಘಾತ ಇದಾಗಿದೆ. 24H ದುಬೈ 2025 ರೇಸಿಂಗ್ ಅಭ್ಯಾಸದ ಸಮಯದಲ್ಲಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಅವರ ಕಾರು ನಿಲುಗಡೆಗೆ ಬರುವ ಮೊದಲು ನಿಯಂತ್ರಣ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿತ್ತು. ಅಪಘಾತ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅಜಿತ್ ರೇಸಿಂಗ್‌ನಲ್ಲಿ ತೊಡಗಿಕೊಳ್ಳಲು ಕಳೆದ ವರ್ಷ ತಮ್ಮ ನಟನಾ ವೃತ್ತಿಯನ್ನು ಬದಿಗಿಟ್ಟು, ಪೋರ್ಷೆ 992 GT3 ಕಪ್ ವಿಭಾಗದಲ್ಲಿ FIA 24H ಸರಣಿಯಲ್ಲಿ ತಮ್ಮದೇ ಆದ ರೇಸಿಂಗ್ ತಂಡ ರಚಿಸಿಕೊಂಡು, ರೇಸ್‌ನಲ್ಲಿ ತೊಡಗುತ್ತಿದ್ದಾರೆ.