– ಶರದ್ ಪವಾರ್‌ಗೆ ಬಿಗ್ ಶಾಕ್!
ನವದೆಹಲಿ: ಅಜಿತ್ ಪವಾರ್ (Ajit Pawar) ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (NCP)ದ ಬಣವನ್ನು ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯೋಗದ (Election Commission) ನಿರ್ಧಾರದಿಂದ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಹಿನ್ನಡೆಯಾಗಿದೆ. ಅಜಿತ್ ಪವಾರ್ ಬಣವು ವಿಧಾನಸಭೆಯಲ್ಲಿ ಹೆಚ್ಚಿನ ಶಾಸಕರನ್ನು ಹೊಂದಿದೆ. ಅವರಿಗೆ ಪಕ್ಷ ಮತ್ತು ಅದರ ಚಿಹ್ನೆಯನ್ನು ನೀಡಲು ನಿರ್ಧರಿಸಿದೆ ಆಯೋಗ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಮಸ್ಯೆ ಏನು ಅಂತ ಅರ್ಥವಾಗ್ತಿಲ್ಲ: ‘ನಾಯಿ ಬಿಸ್ಕೆಟ್’ ಟೀಕೆಗೆ ರಾಹುಲ್ ಗಾಂಧಿ ಕಿಡಿ
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಬಣಕ್ಕೆ ಹೆಸರನ್ನು ಆಯ್ಕೆ ಮಾಡಲು ಶರದ್ ಪವಾರ್ (Sharad Pawar) ಅವರನ್ನು ಕೇಳಲಾಗಿದೆ. ಫೆಬ್ರವರಿ 7 ರಂದು ಮಧ್ಯಾಹ್ನ 3 ಗಂಟೆಯೊಳಗೆ ತಮ್ಮ ಬಣದ ಹೆಸರು ಮತ್ತು ಚಿಹ್ನೆಯನ್ನು ಚುನಾವಣಾ ಆಯೋಗಕ್ಕೆ ತಿಳಿಸಲು ಸೂಚಿಸಲಾಗಿದೆ.
ಎನ್‌ಸಿಪಿಯ 53 ಶಾಸಕರ ಪೈಕಿ ಶರದ್ ಪವಾರ್ ಬಣದಲ್ಲಿ ಈಗ ಉಳಿದಿರುವುದು ಕೇವಲ 12 ಶಾಸಕರು ಮಾತ್ರ. 41 ಶಾಸಕರು ಅಜಿತ್ ಪವಾರ್ ಅವರೊಂದಿಗೆ ಇದ್ದಾರೆ. ಅಜಿತ್ ಪವಾರ್, ಬಿಜೆಪಿ-ಏಕನಾಥ್ ಶಿಂಧೆ ಮೈತ್ರಿಯೊಂದಿಗೆ ಕೈಜೋಡಿಸಿ ತನ್ನ ಚಿಕ್ಕಪ್ಪನಿಂದ (ಶರದ್ ಪವಾರ್) ರಾಜಕೀಯವಾಗಿ ದೂರವಾಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪದ ನಾಗರಿಕ ಸಂಹಿತೆ ಮಸೂದೆ ಮಂಡನೆ
ಎನ್‌ಸಿಪಿ ಸ್ಥಾಪಿಸಿದವರು ಯಾರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಚುನಾವಣಾ ಆಯೋಗದಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಶರದ್ ಪವಾರ್ ಬಣದ ಹಿರಿಯ ನಾಯಕ ಅನಿಲ್ ದೇಶಮುಖ್ ಅಸಮಾಧಾನ ಹೊರಹಾಕಿದ್ದಾರೆ.