ಮುಂಬೈ: ವಿಮಾನ ರನ್‌ವೇ (Runway) ಬಳಿಯೇ ಹಾರುತ್ತಿತ್ತು.ರನ್‌ವೇ ಸಮೀಪಿಸಲು ಇನ್ನೇನು 100 ಅಡಿ ಇದ್ದಾಗ ಪತನಗೊಂಡು ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ (Ajit Pawar) ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿ, ವಿಮಾನ ನೆಲಕ್ಕೆ ಬಿದ್ದ ಕೂಡಲೇ ದೊಡ್ಡ ಸ್ಫೋಟಗೊಂಡಿತು. ನಂತರ 4-5 ಹೆಚ್ಚಿನ ಸ್ಫೋಟಗಳು ಸಂಭವಿಸಿದವು ಎಂದು ತಿಳಿಸಿದರು.
ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಹೊರಗೆ ತೆಗೆಯಲು ಪ್ರಯತ್ನಪಟ್ಟೆವು. ಆದರೆ ಬೆಂಕಿಯ ಜ್ವಾಲೆಯಿಂದ ನಮಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಿಮಾನ ಪತನವಾಗಿ ‘ಮಹಾ’ ಡಿಸಿಎಂ ಅಜಿತ್ ಪವಾರ್ ಸಾವು – ಅಪಘಾತಕ್ಕೀಡಾದ ವಿಮಾನದ ಬಗ್ಗೆ ನಮಗೆಷ್ಟು ಗೊತ್ತು?
ಅಜಿತ್ ಪವಾರ್ ಇಂದು ಬೆಳಿಗ್ಗೆ 8:10ಕ್ಕೆ ಮುಂಬೈನಿಂದ ತಮ್ಮ ಸ್ವಕ್ಷೇತ್ರ ಬಾರಾಮತಿಗೆ ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. 8:45ರ ವೇಳೆಗೆ ಅವರ ವಿಮಾನ ಬಾರಾಮತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡ್ ಆಗುವ ಕೆಲ ಸೆಕೆಂಡ್ ಮೊದಲು ವಿಮಾನ ಪತನವಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುಂಚಿತವಾಗಿ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಅಜಿತ್ ಪವಾರ್ ಬಾರಾಮಾತಿಗೆ ಆಗಮಿಸಿದ್ದರು.

