ಮುಂಬೈ: ಇಂದಿನಿಂದ ಭಾರತದ ಪ್ರೀಮಿಯಂ ಇ-ಟೇಲರ್ ಅಜಿಯೋದಿಂದ (AJIO) ಬಿಗ್ ಬೋಲ್ಡ್ ಸೇಲ್ (Big Bold Sale) ಆರಂಭವಾಗಿದೆ. ಇದಕ್ಕೆ ಅಡಿಡಾಸ್ ಪ್ರಾಯೋಜಕತ್ವ ಮತ್ತು ಸೂಪರ್ ಡ್ರಿ ಸಹಪ್ರಾಯೋಜಕತ್ವ ಇದೆ. ಗ್ರಾಹಕರಿಗೆ ಡಿಸೆಂಬರ್ 4ರಿಂದಲೇ ಮಾರಾಟಕ್ಕೆ ಆರಂಭಿಕ ಪ್ರವೇಶ ದೊರೆತಿದೆ. ಈ ವರೆಗಿನ ಅತಿ ದೊಡ್ಡ ಬಿಗ್ ಬೋಲ್ಡ್ ಸೇಲ್ ಆವೃತ್ತಿ ಇದಾಗಿದ್ದು, ಗ್ರಾಹಕರು 5500+ ಬ್ರ್ಯಾಂಡ್ ಗಳಲ್ಲಿ 1.6 ಮಿಲಿಯನ್ ಕ್ಯುರೇಟೆಡ್ ಫ್ಯಾಷನ್ ಸ್ಟೈಲ್ ಗಳಲ್ಲಿ ತಮಗೆ ಬೇಕಾದದ್ದನ್ನು ಖರೀದಿ ಮಾಡಬಹುದಾಗಿದೆ.
ಈ ಬಿಗ್ ಬೋಲ್ಡ್ ಸೇಲ್‌ನಲ್ಲಿ ಗ್ರಾಹಕರು ಭಾರತದಾದ್ಯಂತ 19,000+ ಪಿನ್ ಕೋಡ್ ಗಳಿಂದ ಖರೀದಿ ಮಾಡಬಹುದಾಗಿದೆ. ಇದರಲ್ಲಿ ಎಕ್ಸ್ ಕ್ಲೂಸಿವ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳು, ಸ್ವಂತ ಲೇಬಲ್ ಗಳು ಮತ್ತು ದೇಶೀಯ ಬ್ರ್ಯಾಂಡ್ ಗಳನ್ನು ಒಳಗೊಂಡಿದೆ. ಫ್ಯಾಷನ್, ಲೈಫ್ ಸ್ಟೈಲ್, ಮನೆ ಹಾಗೂ ಅಲಂಕಾರಗಳು, ಆಭರಣಗಳು, ಸೌಂದರ್ಯ ಮತ್ತು ವೈಯಕ್ತಿಕ ಕಾಳಜಿಯ ವಸ್ತುಗಳು ಇವೆ. ಇವುಗಳಿಗೆ ಅತ್ಯುತ್ತಮ ಡೀಲ್ ಗಳು ಹಾಗೂ ಆಫರ್ ಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಈ ವೇಳೆ ದೊಡ್ಡ ಮಟ್ಟದಲ್ಲಿ ಉಳಿತಾಯ ಮಾಡಬಹುದಾಗಿದ್ದು, ಅತ್ಯುತ್ತಮ ಬ್ರ್ಯಾಂಡ್ ಗಳ ಮೇಲೆ 50% ರಿಂದ 90% ರ ತನಕ ಕಡಿತ ದೊರೆಯುತ್ತದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡ್ ಬಳಸಿದಲ್ಲಿ ಹಲವು ವಿಭಾಗಗಳಲ್ಲಿ 10%ರ ತನಕ ರಿಯಾಯಿತಿ ದೊರೆಯುತ್ತದೆ.
Advertisement
The AJIO BIG BOLD sale is NOW LIVE!
Sale so bold, Shraddha Kapoor got her +1 this time ???????? and it’s none other than Shakti Kapoor.
The Biggest & Boldest sale of the year is here with 50-90% Off on top brands.
Get your iconic looks from 5500+ brands and 1.6 million+ styles off… pic.twitter.com/cbzrRvSHz0
— AJIO (@AJIOLife) December 7, 2023
Advertisement
ಅಡಿಡಾಸ್ (Adidas), ಸೂಪರ್ ಡ್ರಿ (Superdry), ನೈಕಿ (Nike), ಪೂಮಾ (Puma), ಗ್ಯಾಪ್ (GAP), ಅಸಿಕ್ಸ್ (Asics), ಯುಎಸ್‌ಪಿಎ (USPA), ನ್ಯೂ ಬ್ಯಾಲೆನ್ಸ್ (New Balance), ಅಂಡರ್ ಆರ್ಮರ್ (Under Armour), ಸ್ಟೀವ್ ಮ್ಯಾಡನ್ (Steve Madden), ಟಾಮ್ ಹಿಲ್ ಫಿಗರ್ (Tommy Hilfiger), ಡೀಸೆಲ್ (Diesel), ಕಾಲ್ವಿನ್ ಕ್ಲೆಯಿನ್ (Calvin Klein), ಮೈಕೇಲ್ ಕೊರ್ಸ್ (Michael Kors), ಬಾಸ್ (BOSS), ಲಿವೈಸ್ (Levi’s), ಮಾರ್ಕ್ಸ್ ಅಂಡ್ ಸ್ಪೆನ್ಸರ್ (Marks and Spencer), ಅರ್ಮಾನಿ ಎಕ್ಸ್ ಚೇಂಜ್ (Armani Exchange), ರಿತು ಕುಮಾರ್, ಮುಜಿ (MUJI), ಸ್ಯಾಮ್ (SAM), ಬುಡಾ ಜೀನ್ಸ್ ಕಂ., ಫೈರ್ ರೋಸ್, ಪೋರ್ಟಿಕೊ, ಕ್ಯಾಸಿಯೊ, ಲ್ಯಾಕ್ಮೆ, ಮೇಬೆಲಿನ್ ಮತ್ತು ಇನ್ನೂ ಅನೇಕ ಬ್ರ್ಯಾಂಡ್‌ಗಳ ಮೇಲೆ ಆಕರ್ಷಕ ಡೀಲ್ ಗಳಿವೆ. ಇದನ್ನೂ ಓದಿ: ಕಡಿಮೆ ಬೆಲೆಗೆ ಕ್ಲೌಡ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಲು ಮುಂದಾದ ಜಿಯೋ
Advertisement
ಈ ಪ್ರಕಟಣೆ ಬಗ್ಗೆ ಮಾತನಾಡಿದ ಅಜಿಯೋ ಸಿಇಒ ವಿನೀತ್ ನಾಯರ್, ಬಿಗ್ ಬೋಲ್ಡ್ ಸೇಲ್ ಅತ್ಯಂತ ಜನಪ್ರಿಯ ಮಾರಾಟಗಳಲ್ಲಿ ಒಂದಾಗಿದೆ. ಗ್ರಾಹಕರು ಒಂದಾದ ನಂತರ ಮತ್ತೊಂದು ಆವೃತ್ತಿಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆರಂಭಿಕ ಸಂಪರ್ಕ ಪ್ರಾರಂಭ ಆದಾಗಿನಿಂದ, ನಾವು ಈಗಾಗಲೇ ಸಾಮಾನ್ಯ ಮಾರಾಟಕ್ಕಿಂತ ಆರ್ಡರ್‌ಗಳಲ್ಲಿ 40%ರಷ್ಟು ಹೆಚ್ಚಳವನ್ನು ನೋಡಿದ್ದೇವೆ. ಅತಿದೊಡ್ಡ ಬ್ರ್ಯಾಂಡ್‌ಗಳು ಮತ್ತು ಬೋಲ್ಡ್ ಆದ ಆಫರ್ ಗಳ ಜತೆಗೆ ಈ ಶಾಪಿಂಗ್ ಋತುವಿನಲ್ಲಿ ಗ್ರಾಹಕರನ್ನು ಸಂತೋಷಪಡಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದಿದ್ದಾರೆ.
Advertisement
The AJIO BIG BOLD SALE is NOW LIVE✨
Presenting the Biggest Boldest Sale of the year starring @ShraddhaKapoor and Shakti Kapoor
Get 50-90% Off on top brands only on AJIO.
Refresh your wardrobe with iconic looks from 5500+ brands and 1.6 million+ styles, only on AJIO.… pic.twitter.com/H4rGin1pPa
— AJIO (@AJIOLife) December 6, 2023
ಸೂಪರ್ಡ್ರಿ 60% ವರೆಗೆ ರಿಯಾಯಿತಿ, ಅಡಿಡಾಸ್ ಕನಿಷ್ಠ 50% ವರೆಗೆ ರಿಯಾಯಿತಿ, ಗ್ಯಾಪ್ 50%ರ ವರೆಗೆ, ಪೂಮಾ ಮತ್ತು ಮಾರ್ಕ್ ಅಂಡ್ ಸ್ಪೆನ್ಸರ್ ಕನಿಷ್ಠ 40%ರ ರಿಯಾಯಿತಿ, ಅರ್ಮಾನಿ ಎಕ್ಸ್‌ಚೇಂಜ್ 40% ವರೆಗೆ ರಿಯಾಯಿತಿ ಮತ್ತು ನೈಕಿಯಲ್ಲಿ ಕನಿಷ್ಠ 30% ರವರೆಗೆ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಬಹುದು. ಇದನ್ನೂ ಓದಿ: ಇನ್ನು ಮುಂದೆ ಬೇಕಾಬಿಟ್ಟಿ ಸಿಮ್ ಕಾರ್ಡ್ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?
ಮಾರಾಟದ ವೇಳೆ ಪ್ರತಿ 8 ಗಂಟೆಗಳಿಗೊಮ್ಮೆ ಐಫೋನ್ 14 ಪ್ರೊ, ಆಪಲ್ ಮ್ಯಾಕ್ ಬುಕ್ ಏರ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡ್ 4 ಮತ್ತು ಸ್ಯಾಮ್‌ಸಂಗ್ ಎಸ್23 ಅಲ್ಟ್ರಾ ನಂತಹ ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯುವ ಅವಕಾಶವನ್ನು ಗ್ರಾಹಕರು ಹೊಂದಿರುತ್ತಾರೆ. 4,999 ರೂ. ಅಥವಾ ಹೆಚ್ಚಿನದಕ್ಕೆ ಶಾಪಿಂಗ್ ಮಾಡಿ ಮತ್ತು 9,999 ರೂ.ವರೆಗೆ ಖಚಿತವಾದ ಉಡುಗೊರೆಗಳನ್ನು ಪಡೆಯಬಹುದು.
ಗ್ರಾಹಕರು ಎಲ್ಲ ಪ್ರಿಪೇಯ್ಡ್ ವಹಿವಾಟುಗಳಲ್ಲಿ 5% ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಗ್ರಾಹಕರು ಪ್ರತಿ ಬಾರಿ ಶಾಪಿಂಗ್ ಮಾಡುವಾಗ ಅಜಿಯೋ ಪಾಯಿಂಟ್‌ಗಳು ಮತ್ತು ರಿಲಯನ್ಸ್ ಒನ್ ಪಾಯಿಂಟ್‌ಗಳನ್ನು ಗಳಿಸಬಹುದು ಮತ್ತು ಬಳಸಬಹುದು. ಗ್ರಾಹಕರು ತಮ್ಮ ಪ್ರೀತಿಪಾತ್ರರಿಗೆ ಅಜಿಯೋ ವೋಚರ್‌ಗಳನ್ನು ಉಡುಗೊರೆಯಾಗಿ ನೀಡಬಹುದು.