ಚೆನ್ನೈ: ದುಲೀಪ್ ಟ್ರೋಫಿ (Duleep Trophy) ಫೈನಲ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಶ್ಚಿಮ ವಲಯ (West Zone) ತಂಡದ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಬ್ಯಾಟ್ಸ್‌ಮ್ಯಾನ್ ಜೊತೆ ಕಿರಿಕ್ ಮಾಡಿದ ಪರಿಣಾಮ ನಾಯಕ ಅಜಿಂಕ್ಯಾ ರಹಾನೆ (Ajinkya Rahane) ಫೀಲ್ಡಿಂಗ್ ಬಿಟ್ಟು ಹೊರಗೆ ಕಳುಹಿಸಿದ ಘಟನೆ ನಡೆಯಿತು.
Advertisement
ಫೈನಲ್ ಪಂದ್ಯದ ರೋಚಕತೆಯ ನಡುವೆ ದಕ್ಷಿಣ ವಲಯ ಬ್ಯಾಟ್ಸ್‌ಮ್ಯಾನ್ ರವಿತೇಜಾ (Ravi Teja) ಬ್ಯಾಟಿಂಗ್ ಮಾಡುತ್ತಿದ್ದಾಗ ಜೈಸ್ವಾಲ್ ಕಿರಿಕ್ ಆರಂಭಿಸಿದ್ದಾರೆ. 50ನೇ ಓವರ್ ವೇಳೆ ಜೈಸ್ವಾಲ್ ಮತ್ತು ರವಿತೇಜಾ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ‘ಚಕ್ಡಾ ಎಕ್ಸ್ ಪ್ರೆಸ್’ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ
Advertisement
— YA (@YAndyRRSick) September 25, 2022
Advertisement
ಬಳಿಕ ಅಂಪೈರ್ ಮಧ್ಯಪ್ರವೇಶಿಸಿ ಮಾತಿನ ಸಮರವನ್ನು ನಿಲ್ಲಿಸಿ ಪಶ್ಚಿಮ ವಲಯ ನಾಯಕ ರಹಾನೆ ಜೊತೆ ಈ ಬಗ್ಗೆ ತಿಳಿಸಿದರು. ರಹಾನೆ ಜೈಸ್ವಾಲ್ ಬಳಿ ತೆರಳಿ ಸುಮ್ಮನಿರುವಂತೆ ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಿರದ ಜೈಸ್ವಾಲ್ ಮತ್ತೆ ಖ್ಯಾತೆ ತೆಗೆದಿದ್ದಾರೆ. ಈ ವೇಳೆ ರಹಾನೆ ಸುಮ್ಮನಿರದೆ. ನೀನು ಫೀಲ್ಡಿಂಗ್ ಮುಂದುವರಿಸಬೇಡ ಡಗೌಟ್‍ಗೆ ತೆರಳು ಎಂದಿದ್ದಾರೆ. ಬಳಿಕ ಜೈಸ್ವಾಲ್ ಫೀಲ್ಡಿಂಗ್ ಬಿಟ್ಟು ಹೊರನಡೆದರು. ಇದನ್ನೂ ಓದಿ: ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್
Advertisement
ಈ ಘಟನೆಯ ನಡುವೆಯೇ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ, ಸರ್ಫರಾಜ್ ಖಾನ್ ಸಮಯೋಚಿತ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ವಿರುದ್ಧ ಪಶ್ಚಿಮ ವಲಯ 294 ರನ್‍ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ದುಲೀಪ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Live Tv
[brid partner=56869869 player=32851 video=960834 autoplay=true]