4 ದಿನಗಳಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ವ್ಯೂವ್ ಕಂಡ ‘ಗೊಲ್ಮಾಲ್ ಅಗೇನ್’ ಟ್ರೇಲರ್

Public TV
1 Min Read
GOLMAL AGAIN 4

ಮುಂಬೈ: ಅಜಯ್ ದೇವಗನ್ ಮತ್ತೆ ಜನರನ್ನು ಮನರಂಜಿಸಲು ‘ಗೊಲ್ಮಾಲ್ ಅಗೇನ್’ ಮೂಲಕ ಬರಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ 22 ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದ ಟ್ರೇಲರ್ 4 ದಿನಗಳಲ್ಲಿ 2 ಕೋಟಿಕ್ಕಿಂತ ಹೆಚ್ಚು ವ್ಯೂ ಪಡೆದಿದೆ.

GOLMAL AGAIN 3

ಗೊಲ್ಮಾಲ್ ಚಿತ್ರದಲ್ಲಿ ಹಾರರ್, ಹಾಸ್ಯಭರಿತ ದೃಶ್ಯಗಳು, ಕಾಮಿಡಿ ಪಂಚ್‍ಗಳ ಜೊತೆ ಜನರನ್ನು ಮನರಂಜಿಸಲಿದ್ದಾರೆ. ಸಿನಿಮಾದಲ್ಲಿ ಚಿತ್ರದ ನಾಯಕರು ಮತ್ತು ಆತನ ಸ್ನೇಹಿತರೆಲ್ಲಾ ಹಳ್ಳಿಯೊಂದರ ಬಂಗಲೆಗೆ ಹೋಗಿ ವಾಸವಾಗುತ್ತಾರೆ. ಆದರೆ ದುರಾದೃಷ್ಟ ಆ ಮನೆಯಲ್ಲಿ ಅತೃಪ್ತ ಆತ್ಮವೊಂದು ಇರುತ್ತದೆ. ಈ ಎಲ್ಲಾ ಗೆಳೆಯರು ಹೇಗೆ ಭೂತದಿಂದ ತಪ್ಪಿಸಿಕೊಳ್ಳುತ್ತಾರೆ. ಅಸಲಿಗೆ ಕಾಣಿಸಿಕೊಳ್ಳುವ ಭೂತ ಯಾರದು ಎಂಬುದನ್ನು ಸಿನಿಮಾ ನೋಡಿದ ಮೇಲೆ ತಿಳಿಯುತ್ತದೆ. ಒಟ್ಟಿನಲ್ಲಿ ಚಿತ್ರ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ಕೊಡುವುದು ಪಕ್ಕಾ ಎಂಬುದನ್ನು ಟ್ರೇಲರ್ ಹೇಳುತ್ತದೆ.

GOLMAL AGAIN 5

ಈಗಾಗಲೇ ಮೂರು ಆವೃತ್ತಿಗಳಲ್ಲಿ ತೆರೆಕಂಡಿರೋ ಗೋಲ್ಮಾಲ್ ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಬರಲಿದೆ. 2006ರಲ್ಲಿ ಮೊದಲ ಬಾರಿಗೆ ಗೋಲ್ಮಾಲ್ ತೆರೆಕಂಡು ನೋಡುಗರನ್ನು ನಗಿಸುವ ಮೂಲಕ ಯಶಸ್ವಿಯಾಗಿತ್ತು. ಮುಂದೆ ಗೋಲ್ಮಾಲ್ ರಿಟರ್ನ್ (2008) ಮತ್ತು ಗೋಲ್ಮಾಲ್ (2010) ರಲ್ಲಿ ತೆರೆಕಂಡಿದ್ದವು. ಈಗ ಇದೇ ಸಿನಿಮಾದ ಮುಂದುವರೆದ ಭಾಗ ದೀಪಾವಳಿಯಂದು ದೇಶಾದ್ಯಂತ ಬಿಡುಗೆಯಾಗಲಿದೆ.

GOLMAL AGAIN

ಗೋಲ್ಮಾಲ್ ಅಗೇನ್ ಸಿನಿಮಾದಲ್ಲಿ ಅಜಯ್ ದೇವಗನ್‍ಗೆ ಜೊತೆಯಾಗಿ ಪರಿಣೀತಿ ಚೋಪ್ರಾ ಜೊತೆಯಾಗಿದ್ದಾರೆ. ಇನ್ನುಳಿದಂತೆ ಮೊದಲಿನ ಆವೃತ್ತಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅರ್ಷದ್ ವಾರ್ಸಿ, ತುಶಾರ್ ಕಪೂರ್, ಕುನಾಳ್ ಕೇಮು ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ. ಗೋಲ್ಮಾಲ್ ಅಗೇನ್‍ಗೆ ರೋಹಿತ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುವ ಜೊತೆಗೆ ಅಜಯ್ ದೇವಗನ್ ಜೊತೆಗೆ ಬಂಡವಾಳನ್ನೂ ಹೂಡಿದ್ದಾರೆ. ಸಿನಿಮಾ ಅಕ್ಟೋಬರ್ 20ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ.

GOLMAL AGAIN 2

Share This Article
Leave a Comment

Leave a Reply

Your email address will not be published. Required fields are marked *