ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ ನಟ ಅಜಯ್

Public TV
1 Min Read
ajay devgn

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ತನ್ನ ಮಗಳನ್ನು ಟ್ರೋಲ್ ಮಾಡಿದವರ ಚಳಿ ಬಿಡಿಸಿದ್ದಾರೆ.

ಇತ್ತೀಚೆಗೆ ಅಜಯ್ ದೇವಗನ್ ಮಗಳು ನೈಸಾ ಅವರು ನೀಲಿ ಬಣ್ಣದ ಉದ್ದದ ಹೂಡೀಸ್ ಮತ್ತು ಶಾರ್ಟ್ಸ್ ಧರಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ನೈಸಾ ಧರಿಸಿದ್ದ ಹೂಡೀಸ್ ಉದ್ದ ಇದ್ದ ಕಾರಣ ಆಕೆ ಧರಿಸಿದ ಶಾರ್ಟ್ಸ್ ಕಾಣಿಸಿರಲಿಲ್ಲ. ಇದನ್ನು ನೋಡಿದ ಟ್ರೋಲರ್ಸ್ ನೈಸಾಳನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ajay devgan 2

ಈ ವಿಚಾರದ ಬಗ್ಗೆ ಸಂದರ್ಶನಲ್ಲಿ ಪ್ರತಿಕ್ರಿಯಿಸಿದ ಅಜಯ್ ದೇವಗನ್, ಆಕೆಗೆ ಕೇವಲ 14 ವರ್ಷ. ಜನರು ಇದನ್ನು ಮರೆತು ತಮಗೆ ಇಷ್ಟ ಬಂದ ಹಾಗೆ ಮಾತನಾಡುತ್ತಾರೆ. ಆಕೆ ಲಾಂಗ್ ಟಿ-ಶರ್ಟ್ ಹಾಗೂ ಶಾರ್ಟ್ಸ್ ಧರಿಸಿದ್ದಳು. ಟಿ-ಶರ್ಟ್ ಉದ್ದವಿದ್ದ ಕಾರಣ ಶಾರ್ಟ್ಸ್ ಕಾಣಿಸಲಿಲ್ಲ. ಅದಕ್ಕೆ ಜನರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

nysa 1554708299

ಯಾವ ರೀತಿ ಜನರು ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಫೋಟೋಗ್ರಾಫರ್ ಗಳನ್ನು ಒಂದು ಹೇಳಲು ಇಷ್ಟಪಡುತ್ತೇನೆ. ಕಲಾವಿದರ ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಪೋಷಕರು ಸ್ಟಾರ್ ಆಗಿರುವ ಕಾರಣ ಅದರ ಶಿಕ್ಷೆ ಮಕ್ಕಳು ಏಕೆ ಸಹಿಸಕೊಳ್ಳಬೇಕು. ನನ್ನ ಮಗಳು ಯಾವಾಗಲೂ ಅಲಂಕಾರ ಮಾಡಿಕೊಂಡು ಇರುವುದಕ್ಕೆ ಆಗಲ್ಲ. ಈ ರೀತಿಯ ವಿಷಯಗಳು ತುಂಬಾ ನೋವನ್ನು ಮಾಡುತ್ತದೆ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಅಜಯ್ ದೇವಗನ್ ಅವರು ‘ದೇ ದೇ ಪ್ಯಾರ್ ದೇ’, ‘ತಾನಾಜಿ’, ‘ಬೂಜ್’ ಹಾಗೂ ‘ಆರ್‍ಆರ್‍ಆರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾದ ‘ಟೋಟಲ್ ಧಮಾಲ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *