ಮುಂಬೈ: ಶಾರ್ಟ್ಸ್ ಧರಸಿ ದೇಗುಲಕ್ಕೆ ತೆರಳಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅಜಯ್ ಕಾಲೆಳೆದು ಮಜಾ ಪಡೆಯುತ್ತಿದ್ದಾರೆ.
ಹೌದು. ದೇವರ ದರ್ಶಕ್ಕೆ ದೇವಾಲಯಗಳಿಗೆ ತೆರೆಳುವಾಗ ಸಾಮಾನ್ಯವಾಗಿ ಸಾಪ್ರದಾಯಿಕವಾಗಿ ಹೋಗುತ್ತಾರೆ. ಆದರೆ ನಟ ಅಜಯ್ ಅವರು ಶಾರ್ಟ್ಸ್ನಲ್ಲಿ ದೇಗುಲಕ್ಕೆ ಹೋಗಿ ಟ್ರೋಲ್ ಆಗುತ್ತಿದ್ದಾರೆ. ಮಾಂಧ್ವಿಯ ಶ್ರೀ ರಂಗನಾಥ ಮಹಾದೇವ ದೇವಾಲಯಕ್ಕೆ ಅಜಯ್ ಅವರು ಭೇಟಿ ನೀಡಿದ್ದರು. ಈ ವೇಳೆ ಸಾಂಪ್ರದಾಯಿಕ ಉಡುಗೆಯಲ್ಲಿ ಧರಿಸಿ ದೇವರ ದರ್ಶನ ಪಡೆದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ, ಅವರು ಶಾರ್ಟ್ಸ್ ಹಾಕಿಕೊಂಡು ದೇವರ ದರ್ಶನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ. ಅಲ್ಲದೆ ನೆಟ್ಟಿಗರಿಗೂ ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಿದಂತಾಗಿದೆ.
Advertisement
Advertisement
ನೀಲಿ ಟೀ ಶರ್ಟ್ ಮತ್ತು ಡೆನಿಮ್ ಶಾರ್ಟ್ಸ್ ಧರಿಸಿ ಶಿವ ಲಿಂಗದ ಮುಂದೆ ಕುಳಿತು ಅಜಯ್ ಪೂಜೆ ನೆರವೇರಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಅಜಯ್ ಅವರ ಈ ನಡೆಗೆ ಕೆಲವರು ವ್ಯಂಗ್ಯವಾಡಿದ್ದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಜಯ್ ದೇವಗನ್ ಅವರು ಯಾವುದೇ ಉಡುಪು ಧರಿಸಿ ಕುಳಿತು ಪೂಜೆ ಮಾಡುವ ಸ್ವಾತಂತ್ರ್ಯ ಅವರಿಗೆ ಇದೆ. ಆದರೆ, ಇದೇ ದೇವಾಲಯದಲ್ಲಿ ಜನಸಾಮಾನ್ಯರಿಗೆ ಇಂತಹ ಹಕ್ಕು ಇರುವುದಿಲ್ಲ. ಇದು ಸತ್ಯದ ಸಂಗತಿಯಾಗಿದ್ದು, ನೋವುಂಟು ಮಾಡುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ಅಜಯ್ ಅವರು ಶಾರ್ಟ್ಸ್ ಧರಿಸಿ ಮಹದೇವನ ಪೂಜೆ ನೆರವೇರಿಸಿರುವುದರಿಂದ ಪಾಪ ಬರುತ್ತದೆ. ಕನಿಷ್ಠ ಪಕ್ಷವಾದರೂ ಅವರು ದೇವರಿಗೆ ಗೌರವ ಕೊಡಬೇಕಿತ್ತು ಎಂದು ಕಿಡಿಕಾರಿದ್ದಾರೆ.