ಜೈಪುರ: ಸಹಜವಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಥವಾ ಜೈಲಿನಲ್ಲಿರುವ ಕೈದಿಗಳಿಗೆ ತುರ್ತು ಅಥವಾ ಅನಿವಾರ್ಯ ಕಾರಣಗಳಿಗೆ ಪೆರೋಲ್ ನೀಡಲಾಗುತ್ತದೆ. ಆದರೆ, ಇಲ್ಲೊಬ್ಬ ಕೈದಿಗೆ ಹೆಂಡತಿಯನ್ನು ಗರ್ಭಿಣಿ ಮಾಡಲು ರಾಜಸ್ಥಾನ್ ಹೈಕೋರ್ಟ್ 15 ದಿನ ಪೆರೋಲ್ ಮಂಜೂರು ಮಾಡಿದೆ.
Advertisement
ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ಫರ್ಜಂದ್ ಅಲಿ ಅವರ ದ್ವಿಸದಸ್ಯ ಪೀಠವು ಅಜ್ಮೀರ್ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 34 ವರ್ಷದ ನಂದ್‌ಲಾಲ್ (ಕೈದಿ) ಅವರ ಪತ್ನಿ ರೇಖಾ ಅವರ ಸಂತಾನದ ಹಕ್ಕು ಆಧಾರದ ಮೇಲೆ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ. ಇದನ್ನೂ ಓದಿ: ಚಾಮರಾಜನಗರದ ಲಿಪ್‌ಲಾಕ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಪೊಲೀಸರು
Advertisement
ಇದಕ್ಕಾಗಿ 50 ಸಾವಿರ ರೂ.ಗಳ ವೈಯಕ್ತಿಕ ಜಾಮೀನು ಬಾಂಡ್ ಹಾಗೂ ತಲಾ 25,000ಕ್ಕೆ ಎರಡು ಜಾಮೀನು ಬಾಂಡ್‌ಗಳನ್ನು ಪೆರೋಲ್‌ಗೆ ನೀಡಿದ್ದು, ಏಪ್ರಿಲ್ 20ರಿಂದ 15 ದಿನಗಳವರೆಗೆ ಕೈದಿಯನ್ನು ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: 13 ವರ್ಷದ ಬಾಲಕಿ ಮೇಲೆ 80 ಮಂದಿ 8 ತಿಂಗಳಿಂದ ಅತ್ಯಾಚಾರ
Advertisement
Advertisement
ಅಪರಾಧಿಯ ಜೈಲುವಾಸ ಆತನ ಹೆಂಡತಿಯ ಲೈಂಗಿಕ ಅಪೇಕ್ಷೆಗಳು ಮತ್ತು ಭಾವನಾತ್ಮಕ ಅಗತ್ಯಗಳ ಮೇಲೆ ಪರಿಣಾಮ ಬೀರಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಋಗ್ವೇದ ಸೇರಿದಂತೆ ಹಿಂದೂ ಧರ್ಮಗ್ರಂಥಗಳನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಕೈದಿಗಳಿಗೆ 15 ದಿನಗಳ ಪೆರೋಲ್ ನೀಡಲು ಅವರು ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಪರಿಗಣಿಸಲಾಗಿದೆ. 16 ಸಂಸ್ಕಾರಗಳಲ್ಲಿ ಮಗುವನ್ನು ಗರ್ಭಧರಿಸುವುದು ಮಹಿಳೆಯ ಮೊದಲ ಮತ್ತು ಅಗತ್ಯ ಹಕ್ಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿ ಕೈದಿಗೆ ಪೆರೋಲ್ ನೀಡಿದೆ.