ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

Public TV
2 Min Read
Ajay Rao

ಚಂದನವನದ ಕೃಷ್ಣ ಅಜಯ್ ರಾವ್ ‘ಲವ್ ಯೂ ರಚ್ಚು’ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಕೊನೆಯಬಾರಿ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡು ರಂಜಿಸಿದ್ದರು. ಈ ಸಿನಿಮಾ ನಂತರ ಅಜಯ್ ತಮ್ಮ ಮುಂದಿನ ಪ್ರಾಜೇಕ್ಟ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟಿರಲಿಲ್ಲ. ಅಭಿಮಾನಿಗಳಿಗೆ ಅಚ್ಚರಿ ಮೂಡಿಸಲು ತಮ್ಮ ಎಲ್ಲ ಕೆಲಸಗಳನ್ನು ಮೌನವಾಗಿ ಮಾಡುತ್ತಿದ್ದರು. ಈ ಹಿನ್ನೆಲೆ ಅಜಯ್ ತಮ್ಮ ಕೈಯಲ್ಲಿರುವ ಎರಡು ಸಿನಿಮಾ ಮುಗಿದ ನಂತರ ಸಿನಿಲೋಕದಲ್ಲಿ ಹೊಸಜರ್ನಿ ಪ್ರಾರಂಭ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

Love u rachu / ಮೂಹೂರ್ತ muhurtha exclusive /rachitha ram /ajay rao / gurudeshpande /shankar s raj... - YouTube

ಅಜಯ್‍ಗೆ ನಟನೆ ಜೊತೆ ನಿರ್ದೇಶನದಲ್ಲಿಯೂ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ತಮ್ಮ ಚೊಚ್ಚಲ ನಿರ್ದೇಶನ ಸಿನಿಮಾವನ್ನು ಈ ವರ್ಷದ ಕೊನೆಯಲ್ಲಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಪ್ರಸ್ತುತ ಎರಡು ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಜಯ್ ಈ ಸಿನಿಮಾ ಸಂಪೂರ್ಣ ಮುಗಿದ ತಕ್ಷಣ ತಮ್ಮ ನಿರ್ದೇಶದ ಮೊದಲ ಸಿನಿಮಾ ಕೈಗೆತ್ತಿಕೊಳ್ಳಲು ಸಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹಾಲಿವುಡ್ ಖ್ಯಾತ ನಟಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂಬ ಹೇಳಿಕೆಗೆ 50 ಲಕ್ಷ ಆಫರ್: ಖ್ಯಾತ ನಟ ಬಿಚ್ಚಿಟ್ಟ ರಹಸ್ಯ

AJAY RAO 2

ಈ ಕುರಿತು ಪ್ರತಿಕ್ರಿಯಿಸಿದ ಅಜಯ್, ಮಂಜು ಸ್ವರಾಜ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ. ಈ ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರವು ರೆಟ್ರೋ ಲವ್ ಸ್ಟೋರಿಯಾಗಿದ್ದು, ಕಾದಂಬರಿ ಆಧರಿತ ಸಿನಿಮಾವಾಗಿದೆ. ಇದರ ಜೊತೆಗೆ ಇನ್ನೊಂದು ಒಳ್ಳೆ ಸ್ಕ್ರಿಪ್ಟ್‍ಗಾಗಿ ಹುಡುಕುತ್ತಿದ್ದೇನೆ. ನನ್ನ ಟೀಮ್ ಸಹ ಇದಕ್ಕಾಗಿ ಸಾಕಷ್ಟು ಕೆಲಸಮಾಡುತ್ತಿದೆ. ಮಂಜು ಅವರ ಸಿನಿಮಾ ಮುಗಿದ ತಕ್ಷಣ ಈ ಸಿನಿಮಾದ ಕೆಲಸ ಶುರು ಮಾಡುವ ಯೋಚನೆ ಇದೆ. ಈ ಎರಡನೇ ಸಿನಿಮಾ ಮುಗಿಸಿದ ನಂತರ, ನಾನು ಅಂತಿಮವಾಗಿ ನಿರ್ದೇಶಕನಾಗಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

Actor Ajay Rao

ನನ್ನ ನಟನೆಯ ಎಲ್ಲ ಸಿನಿಮಾಗಳ ಚಿತ್ರೀಕರಣ ಮುಗಿದ ನಂತರವಷ್ಟೆ ನಿರ್ದೇಶದ ಕಡೆ ಹೆಚ್ಚು ಯೋಚನೆ ಮಾಡಲು ಸಾಧ್ಯವಾಗುತ್ತೆ. ಅದಕ್ಕಾಗಿಯೇ ನಾನು ಕಥೆಯನ್ನು ಬರೆಯುತ್ತಿದ್ದೇನೆ. ಶೀಘ್ರದಲ್ಲೇ ಸ್ಕ್ರಿಪ್ಟ್ ಸಿದ್ಧಪಡಿಸುವ ಭರವಸೆ ಇದೆ. ವರ್ಷದ ಅಂತ್ಯದಲ್ಲಿ ನನ್ನ ನಿರ್ದೇಶನದ ಕೆಲಸವನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ 

Share This Article
Leave a Comment

Leave a Reply

Your email address will not be published. Required fields are marked *