ಉಡುಪಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿಯನ್ನು ನೀಚ ಎಂದು ಬೈದಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶಗೊಂಡು ವಾಗ್ದಾಳಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಅಯ್ಯರ್ ಮಾತನಾಡಿದ್ದು, ಕಾಂಗ್ರೆಸ್‍ನ ಮಾನಸಿಕ ಮನಸ್ಥಿತಿಯನ್ನು ತೋರಿಸುತ್ತದೆ. ಅವರಿಗೆ ಅಧಿಕಾರ ಇಲ್ಲದಿದ್ದಾಗ ಮಾತ್ರ ಚಡಪಡಿಕೆಯ ಮಾತು ಬರುತ್ತದೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ಪ್ರಧಾನಿ ಮೋದಿಯನ್ನು ಯಾಕೆ ನೀಚ ಎಂದು ಕರೆದರು ಎಂದು ಕಾಂಗ್ರೆಸ್ ಉತ್ತರ ಕೊಡಬೇಕಾಗಿದೆ. ಆದ್ದರಿಂದ ಕಣ್ಣೊರೆಸುವ ತಂತ್ರದಿಂದ ಅವರನ್ನು ಅಮಾನತು ಮಾಡಿದ್ದೀರಿ ಎಂದು ಶೋಭಾ ಕೋಪದಿಂದ ಹೇಳಿದ್ದಾರೆ.
Advertisement
ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಇದು ದುಬಾರಿಯಾಗುತ್ತದೆ. ಭಾರತವನ್ನು ಕಾಂಗ್ರೆಸ್‍ನ ವಂಶಾಡಳಿತಕ್ಕೆ ಬರೆದುಕೊಟ್ಟಿಲ್ಲ. ಅಧಿಕಾರ ಇಲ್ಲದಿದ್ದಾಗ ಇವರಿಗೆ ಚಡಪಡಿಕೆ ಶುರುವಾಗುತ್ತದೆ. ಅದರ ಪ್ರತಿಫಲವೇ ನೀಚ ಎಂಬ ಶಬ್ದವನ್ನು ಬಳಸಿರುವುದು. ಗುಜರಾತಿನ ಜನರು ಕಾಂಗ್ರೆಸ್‍ಗೆ ಸರಿಯಾಗಿ ಪಾಠ ಕಲಿಸುತ್ತಾರೆ ಎಂದು ಹೇಳಿದರು.
Advertisement
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ಆರಂಭವಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಜನ ಐದು ವರ್ಷದ ಹಿಂದೆ ಆಶೀರ್ವಾದ ಮಾಡಿದ್ದರು. ಈಗ ಮಾಡುವುದು ಕನಸಿನ ಮಾತು. ಸಿಎಂ ಅವರು ಘೋಷಿಸಿರುವ ಎಲ್ಲಾ ಭಾಗ್ಯಗಳು ಪ್ಲಾಪ್ ಆಗಿರುವಾಗ ಜನ ಯಾಕೆ ಆಶೀರ್ವಾದ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿ ಮಾತನಾಡಿದರು.
ಇದನ್ನು ಓದಿ: ಅಂದು ಚಾಯ್‍ವಾಲಾ, ಇಂದು ನೀಚ್ ಅಂದ್ರು: ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ?