ಬಿಗ್ ಬಾಸ್ ಮನೆಯ ಆಟ (Bigg Boss Kannada 11) ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ. ಒಂದ್ ಕಡೆ ಬಿಗ್ ಬಾಸ್‌ನಿಂದ ನಾನು ಹೊರಹೋಗುತ್ತೇನೆ ಎಂದು ಶೋಭಾ ಶೆಟ್ಟಿ (Shobha Shetty) ಕಣ್ಣೀರಿಟ್ಟಿದ್ದರೆ, ಇತ್ತ ಐಶ್ವರ್ಯಾ ಸಿಂಧೋಗಿ (Aishwarya Shindogi) ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ದರ್ಶನ್ ಸರ್ಜರಿಗೆ ತರಾತುರಿಯಲ್ಲಿ ಪ್ಲ್ಯಾನ್ – ಜಾಮೀನು ಅವಧಿ ಉಳಿದಿರೋದು 11 ದಿನ ಮಾತ್ರ
Advertisement
ದೊಡ್ಮನೆಯಲ್ಲಿ 60 ದಿನಗಳನ್ನು ಪೂರೈಸಿರೋ ಐಶ್ವರ್ಯಾ ಅವರು ಮನರಂಜನೆ, ಫಿಸಿಕಲ್ ಟಾಸ್ಕ್ಗಳಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಶಿಶಿರ್ ಜೊತೆ ಹೈಲೆಟ್ ಆಗಿದ್ದೇ ಹೆಚ್ಚು. ಇದೀಗ ಅವರ ಬಿಗ್ ಬಾಸ್ ಆಟಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ಸುದ್ದಿ ನಿಜನಾ? ಎಂಬುದು ಇಂದಿನ ಸಂಚಿಕೆಯಲ್ಲಿ (ಡಿ.1) ಉತ್ತರ ಸಿಗಲಿದೆ. ಇದನ್ನೂ ಓದಿ:ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್
Advertisement
Advertisement
ಇನ್ನೂ ಈ ವಾರದಲ್ಲಿ ಅವರು ಉತ್ತರ ಪ್ರದರ್ಶನ ನೀಡಿದ್ದು, ಮನೆ ಮಂದಿಯಿಂದ ಉತ್ತಮ ಪಟ್ಟ ಅವರಿಗೆ ಸಿಕ್ಕಿತ್ತು. ಕಳಪೆ ಆಟ ಎಂದು ಶೋಭಾ ಶೆಟ್ಟಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಐಶ್ವರ್ಯಾ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಫ್ಯಾನ್ಸ್‌ಗೆ ಅಚ್ಚರಿಯ ಜೊತೆ ಶಾಕ್ ಕೊಟ್ಟಿದೆ.