‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇತ್ತ ದೊಡ್ಮನೆ ಆಟ ಮುಗಿದ ಮೇಲೆಯೂ ‘ಬಿಗ್ ಬಾಸ್’ ಸ್ಪರ್ಧಿಗಳಾದ ಹನುಮಂತ, ಧನರಾಜ್ ಆಚಾರ್, ಐಶ್ವರ್ಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹನುಮಂತ, ಧನರಾಜ್ (Dhanraj Achar) ಸ್ನೇಹಕ್ಕೆ ಐಶ್ವರ್ಯಾ ಹಾರೈಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಹನುಮಂತು (Hanumantha) ವ್ಯಕ್ತಿತ್ವ, ಧನರಾಜ್ ಮಾತು ಹಾಲು ಸಕ್ಕರೆ ಇದ್ದಂಗೆ. ಹೀಗೆ ಇರಲಿ ಇಬ್ಬರ ಸ್ನೇಹ ಎಂದು ಐಶ್ವರ್ಯಾ ಶಿಂಧೋಗಿ (Aishwarya Shindogi) ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ಫ್ಯಾನ್ಸ್ ದೃಷ್ಟಿ ತೆಗೆಯಿರಿ ಎಂದು ಕಾಮೆಂಟ್‌ಗಳ ಸುರಿಮಳೆ ಹರಿದು ಬರುತ್ತಿವೆ.
View this post on Instagram
ಅಂದಹಾಗೆ, ‘ಬಿಗ್ ಬಾಸ್’ ಮುಗಿದ ಮೇಲೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಹನುಮಂತು, ರಜತ್, ಶೋಭಾ ಶೆಟ್ಟಿ, ಐಶ್ವರ್ಯಾ ಶಿಂಧೋಗಿ, ಭವ್ಯಾ ಕಾಣಿಸಿಕೊಳ್ತಿದ್ದಾರೆ.