ಸ್ಟಾರ್ ನಟ ಧನುಷ್ ಅವರ ಮಾಜಿಪತ್ನಿ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಮೊನ್ನೆಷ್ಟೇ ಹೊಸ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈಗಾಗಲೂ ಮೂರು ಚಿತ್ರಗಳನ್ನು ತಮಿಳಿನಲ್ಲೇ ನಿರ್ದೇಶನ ಮಾಡಿರುವ ಅವರು, ಮುಂದಿನ ಚಿತ್ರವನ್ನು ಅದೇ ಭಾಷೆಯಲ್ಲೇ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಈಗ ಅಂದಾಜ ಸುಳ್ಳಾಗಿದೆ. ಇದೇ ಮೊದಲ ಬಾರಿಗೆ ಅವರು ಬಾಲಿವುಡ್ ನಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.
‘ನಾನೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದೇನೆ. ನನ್ನ ಮೊದಲ ಬಾಲಿವುಡ್ ಸಿನಿಮಾದ ಟೈಟಲ್ ಘೋಷಣೆ ಮಾಡುವುದಕ್ಕೆ ಹೆಮ್ಮೆ ಆಗುತ್ತಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಚೊಚ್ಚಲು ಹಿಂದಿ ನಿರ್ದೇಶನದ ಚಿತ್ರಕ್ಕೆ ಅವರು ‘ಓ ಸಾತಿ ಚಲ್’ ಎಂದು ಟೈಟಲ್ ಇಟ್ಟಿದ್ದಾರೆ. ಇದು ಅವರ ಬಾಲಿವುಡ್ ನ ಮೊದಲ ಸಿನಿಮಾವಾಗಿದ್ದರಿಂದ ಎಲ್ಲರ ಹಾರೈಕೆಯನ್ನೂ ಅವರು ಕೇಳಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?
ಪತಿ ಧನುಷ್ ಮತ್ತು ಶ್ರುತಿ ಹಾಸನ್ ಕಾಂಬಿನೇಷನ್ ನ ‘3’ ಸಿನಿಮಾದ ಮೂಲಕ ನಿರ್ದೇಶಕಿಯಾಗಿ ತಮಿಳು ಸಿನಿಮಾ ರಂಗಕ್ಕೆ ಪ್ರವೇಶ ಪಡೆದವರು ಐಶ್ವರ್ಯ. ಆನಂತರ ಅವರು ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಸ್ವಲ್ಪ ವರ್ಷಗಳ ಬಿಡುಗಡೆ ತಗೆದುಕೊಂಡು ಮತ್ತೆ ನಿರ್ದೇಶನಕ್ಕೆ ಐಶ್ವರ್ಯ ಮುಂದಾಗಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ
ಮೊನ್ನೆಯಷ್ಟೇ ಇವರ ನಿರ್ದೇಶನದಲ್ಲಿ ಸಿಂಗಲ್ ವಿಡಿಯೋ ಆಲ್ಬಂ ಒಂದು ಮೂಡಿ ಬಂದಿತ್ತು. ಅದು ರಿಲೀಸ್ ಆದ ವೇಳೆಯಲ್ಲಿ ಧನುಷ್ ವಿಶ್ ಮಾಡಿದ್ದರು. ‘ಸ್ನೇಹಿತೆ ನಿಮಗೆ ಒಳ್ಳೆಯದಾಗಲಿ’ ಎಂದು ಸಂದೇಶ ಹಾಕಿ ಅಚ್ಚರಿ ಮೂಡಿಸಿದ್ದರು. ಧನುಷ್ ಅವರ ವಿಶ್ ಗೂ ಐಶ್ವರ್ಯ ಪ್ರತಿಕ್ರಿಯೆ ನೀಡಿದ್ದರು.