ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಪುತ್ರಿ, ನಟ ಧನುಷ್ ಅವರ ಮಾಜಿ ಪತ್ನಿ ಐಶ್ವರ್ಯಾ (Aishwarya) ಸದ್ಯದಲ್ಲೇ ಮತ್ತೊಂದು ಮದುವೆ (Marriage) ಆಗಲಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾ ರಂಗದಲ್ಲಿ ದಟ್ಟವಾಗಿತ್ತು. ಯುವ ನಟನ ಜೊತೆ ಐಶ್ವರ್ಯಾ ಮದುವೆಯಾಗಲಿದ್ದಾರೆ ಎನ್ನುವುದು ದೊಡ್ಡ ಸುದ್ದಿಯೂ ಆಗಿತ್ತು. ಸದ್ಯ ಲಾಲ್ ಸಲಾಂ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಐಶ್ವರ್ಯಾ ಈ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಹಸೆಮಣೆ ಏರಲಿದ್ದಾರೆ ಎನ್ನುವಲ್ಲಿಗೆ ಸುದ್ದಿ ಸೇಲ್ ಆಗಿತ್ತು.
ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ಇದೊಂದು ಕೇವಲ ವದಂತಿ ಎಂದು ಹೇಳಲಾಗುತ್ತಿದೆ. ನಟ ಧನುಷ್ (Dhanush) ಮತ್ತು ಐಶ್ವರ್ಯಾ ಇಬ್ಬರೂ ದೂರವಾಗಿದ್ದರೂ, ಇವರಿಗೆ ಇರುವ ಇಬ್ಬರು ಮಕ್ಕಳು ಎರಡೂ ಕಡೆ ಓಡಾಡುತ್ತಿದ್ದಾರೆ. ಹಾಗಾಗಿ ಧನುಷ್ ಮತ್ತು ಐಶ್ವರ್ಯಾ ಅವರನ್ನು ಮತ್ತೆ ಒಂದಾಗಿಸುವ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ. ಧನುಷ್ ಅವರ ಕುಟುಂಬದ ಜೊತೆ ರಜನಿ ಈ ಹಿಂದೆ ಮಾತನಾಡಿದ್ದರು. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ
ಸದ್ಯ ಐಶ್ವರ್ಯಾ ‘ಲಾಲ್ ಸಲಾಂ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ರಜನಿಕಾಂತ್ ಕೂಡ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಧನುಷ್ ಕೂಡ ತಾವೇ ನಿರ್ದೇಶನ ಮಾಡುತ್ತಾ, ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಒಂದು ಚಿತ್ರ ರಿಲೀಸ್ಗೆ ರೆಡಿ ಇದೆ. ಮೊನ್ನೆಯಷ್ಟೇ ಮಕ್ಕಳನ್ನು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಕರೆದುಕೊಂಡು ಬಂದು ಮುಡಿ ಕೊಟ್ಟಿದ್ದರು. ಈ ನಡುವೆ ಐಶ್ವರ್ಯಾ ಮದುವೆ ಸುದ್ದಿ ಬಂದಿದೆ.
ಐಶ್ವರ್ಯಾ ಅವರ ಆಪ್ತರೇ ಖಚಿತ ಪಡಿಸಿದಂತೆ ಯಾವ ನಟನ ಜೊತೆಯೂ ಐಶ್ವರ್ಯಾ ಮದುವೆ ಆಗುತ್ತಿಲ್ಲವಂತೆ. ಇದೊಂದು ಕಪೋಕಲ್ಪಿತ ವರದಿ ಎಂದು ಹೇಳಿದ್ದಾರೆ. ಇಂತಹ ಸುದ್ದಿಗಳು ಅವರ ಕೆಲಸಕ್ಕೆ ತೊಂದರೆಯನ್ನುಂಟು ಮಾಡುತ್ತವೆ ಎಂದೂ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Web Stories