ಮುಂಬೈ: ಬಾಲಿವುಡ್‍ನ ಮೋಹಕ ನಟಿ ಐಶ್ವರ್ಯ ರೈ ಕಾಸ್ಷ್ಯೂಮ್ ಸರಿಯಿಲ್ಲ ಎಂಬ ಕಾರಣಕ್ಕೆ `ಫೆನ್ನಿ ಖಾನ್’ ಶೂಟಿಂಗ್‍ನ ಇಡೀ ಶೆಡ್ಯೂಲ್ ಕ್ಯಾನ್ಸಲ್ ಮಾಡಿದ್ದಾರೆ.
ಅನಿಲ್ ಕಪೂರ್ ಜೊತೆಗೆ ನಟಿಸುತ್ತಿರುವ `ಫೆನ್ನಿ ಖಾನ್’ ಚಿತ್ರದಲ್ಲಿ ಐಶ್ವರ್ಯ ಪಾತ್ರ ತುಂಬಾ ಗ್ಲಾಮರಸ್ ಆಗಿದ್ದು, ಒಬ್ಬ ಶ್ರೇಷ್ಠ ಹಾಡುಗಾರ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಿರೋದ್ರಿಂದ ಪಾತ್ರಕ್ಕೆ ತಕ್ಕಂತೆ ವಸ್ತ್ರ ವಿನ್ಯಾಸ ಸಿದ್ಧಪಡಿಸಬೇಕಿತ್ತು.
Advertisement
ಫೆನ್ನಿ ಖಾನ್ ಸಿನಿಮಾಗಾಗಿ ಪ್ರಸಿದ್ಧ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಆದರೆ ಮನೀಶ್ ಸಿದ್ಧಪಡಿಸಿರುವ ವಸ್ತ್ರವಿನ್ಯಾಸ ಐಶ್ವರ್ಯರಿಗೆ ಇಷ್ಟವಾಗಿಲ್ಲ. ಹೀಗಾಗಿ ಅಸಮಾಧಾನಗೊಂಡ ಐಶ್ವರ್ಯ ಮೊದಲ ದಿನದ ಶೂಟಿಂಗ್ ರದ್ದು ಮಾಡಿದ್ದಾರೆ. ಹೀಗಾಗಿ ಚಿತ್ರೀಕರಣವನ್ನ ದೀಪಾವಳಿವರೆಗೂ ಮುಂದೂಡಲಾಗಿದೆ.
Advertisement
ರಾಕೇಶ್ ಓಂ ಪ್ರಕಾಶ್ ಮೆಹ್ರಾ ಮತ್ತು ಪ್ರೇರಣಾ ಆರೋರಾ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅನಿಲ್ ಕಪೂರ್ ಗಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅತುಲ್ ಮುಖರ್ಜಿಗೆ ಇದು ಬಾಲಿವುಡ್‍ನಲ್ಲಿ ಮೊದಲ ಚಿತ್ರವಾಗಿದೆ. ಆಸ್ಕರ್‍ಗೆ ನಾಮಾಂಕಿತವಾಗಿದ್ದ ಎವೆರಿಬಡಿ ಈಸ್ ಫೇಮಸ್ ಎಂಬ ಡಚ್ ಸಿನಿಮಾದ ರೂಪಾಂತರ ಇದಾಗಿದೆ. ಚಿತ್ರ 2018ರ ಏಪ್ರಿಲ್‍ಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.