ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯದಿದ್ದ ಬಾಲಿವುಡ್ ನಟಿ ಐಶ್ವರ್ಯ ರೈ ಈಗ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ.
aishwaryaraibachchan_arbಎಂಬ ಹೆಸರಿನಲ್ಲಿ ಖಾತೆ ತೆರೆದಿರುವ ಅವರು, ಯಾವುದೇ ಪೋಸ್ಟ್ ಮಾಡಿಲ್ಲ. ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು ಭಾಗವಹಿಸಲು ಗುರುವಾರ ತೆರಳಿದ್ದರಿಂದ ಯಾವುದೇ ಪೋಸ್ಟ್ ಮಾಡಿಲ್ಲ ಎನ್ನಲಾಗುತ್ತಿದೆ.
ಕ್ಯಾನೆ ಚಲನಚಿತ್ರೋತ್ಸವದಲ್ಲಿ ಅವರು 17ನೇ ಬಾರಿ ಭಾಗವಹಿಸುತ್ತಿದ್ದು, ತಮ್ಮ ಮಗಳೊಂದಿಗೆ ಮುಬೈನಿಂದ ಫ್ರಾನ್ಸ್ ಗೆ ತೆರಳಿದ್ದಾರೆ.
ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಐಶ್ವರ್ಯ ರೈ, ತಮ್ಮ ಖಾಸಗಿ ಜೀವನದ ಕುರಿತು ಗುಟ್ಟು ಹಂಚಿಕೊಳ್ಳುತ್ತಿರಲಿಲ್ಲ. ಆದರೆ, ಖಾತೆ ತೆರೆದಿರುವ ಅವರು ಏನನ್ನು ಮೊದಲು ಹೇಳುತ್ತಾರೆ. ಯಾವ ವಿಷಯದ ಕುರಿತು ಮೊದಲು ಪೋಸ್ಟ್ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಐಶ್ವರ್ಯ ರೈ ಯಾರನ್ನೂ ಫಾಲೋ ಮಾಡುತ್ತಿಲ್ಲ. ಆದರೆ ಅವರನ್ನು 1.34 ಲಕ್ಷಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.