ಬಿಗ್ ಬಿ ಸೊಸೆ, ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಮತ್ತು ನಟ ಅಭಿಷೇಕ್ ಬಚ್ಚನ್ ಏಕೈಕ ಪುತ್ರಿ ಆರಾಧ್ಯಾ ಬಚ್ಚನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 11ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆರಾಧ್ಯಾಳಿಗೆ ಅಮ್ಮ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು ನೀಡಿ ವಿಶ್ ಮಾಡಿದ್ದಾರೆ. ಮಗಳಿಗೆ ಲಿಪ್‌ಕಿಸ್ ಮಾಡಿರುವ ಐಶ್ವರ್ಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಶ್ವರ್ಯಾ ಮಗಳಿಗೆ ಕಿಸ್ ಮಾಡಿರುವುದಕ್ಕೆ ಕೆಲವರು ತಕರಾರು ಮಾಡಿದ್ದಾರೆ.
Advertisement
`ಪೊನ್ನಿಯನ್ ಸೆಲ್ವನ್'(Ponniyan Selvan) ಚಿತ್ರದ ಸಕ್ಸಸ್ ನಂತರ ಮತ್ತೆ ಸಿನಿಮಾಗಳಲ್ಲಿ ಐಶ್ವರ್ಯಾ ಆಕ್ಟೀವ್ ಆಗಿದ್ದಾರೆ. ಇನ್ನೂ ಇಂದು ಐಶ್ವರ್ಯಾ ಮಗಳು ಆರಾಧ್ಯ ಹುಟ್ಟುಹಬ್ಬವಾಗಿದ್ದು, ವಿಶೇಷವಾಗಿ ನಟಿ ಶುಭಕೋರಿದ್ದಾರೆ. ಈಗ ನಟಿ ಶುಭಕೋರಿರುವ ರೀತಿಗೆ ನೆಟ್ಟಿಗರಿಂದ ತರಾಟೆ ಶುರುವಾಗಿದೆ. ಮಗಳು ಆರಾಧ್ಯಳಿಗೆ ಮುತ್ತು ನೀಡುತ್ತಿರುವ ಫೋಟೋ ಶೇರ್ ಮಾಡಿ, ನನ್ನ ಪ್ರೀತಿ, ನನ್ನ ಜೀವ, ತುಂಬಾ ಪ್ರೀತಿಸುತ್ತೀನಿ, ನನ್ನ ಆರಾಧ್ಯ ಎಂದು ಬರೆದುಕೊಂಡಿದ್ದಾರೆ. ತಾಯಿ-ಮಗಳ ಮುದ್ದಾದ ಫೋಟೋಗೆ ಅಭಿಮಾನಿಗಳು ಲೈಕ್ಸ್ ಮತ್ತು ಹಾರ್ಟ್ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅತಿಯಾಯಿತು, ತುಟಿಗೆ ಕಿಸ್ ಮಾಡುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್
Advertisement
Advertisement
ಅನೇಕರು ಹುಟ್ಟುಹಬ್ಬ ಶುಭಾಶಯಗಳು ಮಿನಿ ಐಶ್ ಎಂದು ಹೇಳಿದ್ದಾರೆ. ಮತ್ತೋರ್ವ ಆಭಿಮಾನಿ ಕಾಮೆಂಟ್ ಮಾಡಿ ಸುಂದರವಾದ ಕ್ಷಣವನ್ನು ಕ್ಯಾಪ್ಚರ್ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಯಿ-ಮಗಳ ಅದ್ಭುತವಾದ ಫೋಟೋ ಎಂದು ವ್ಯಕ್ತಿಯೊಬ್ಬ ಪ್ರೀತಿ ವ್ಯಕ್ತಪಡಿಸಿದ್ದಾರೆ.
Advertisement
View this post on Instagram
ನಟಿ ಐಶ್ವರ್ಯಾ ಸದಾ ಮಗಳ ಜೊತೆಯೇ ಇರುತ್ತಾರೆ. ಕೈ ಹಿಡಿದುಕೊಂಡೆ ಕರೆದುಕೊಂಡು ಹೋಗುತ್ತಾರೆ. ಈ ಎಲ್ಲಾ ವಿಚಾರಗಳು ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಈಗ ಮಗಳಿಗೆ ಲಿಪ್ ಕಿಸ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.