ಆದಾಯ ತೆರಿಗೆ ಇಲಾಖೆಯ ವಿರುದ್ಧದ ಕಾನೂನು ಹೋರಾಟದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ 4 ಕೋಟಿ ರೂ. ತೆರಿಗೆ ಪ್ರಕರಣದಲ್ಲಿ ಜಯ ಸಾಧಿಸಿದ್ದಾರೆ. ಮುಂಬೈನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಐಶ್ವರ್ಯ ರೈ (Aishwarya Rai) ಪರವಾಗಿ ತೀರ್ಪು ನೀಡಿದೆ.
2022-23 ರ ಮೌಲ್ಯಮಾಪನ ವರ್ಷಕ್ಕೆ ನಟಿ ಒಟ್ಟು 39 ಕೋಟಿ ರೂ. ಆದಾಯವನ್ನು ಘೋಷಿಸಿದ್ದರು. ಜೊತೆಗೆ 449 ಕೋಟಿ ರೂ. ಮೌಲ್ಯದ ತೆರಿಗೆ ಮುಕ್ತ ಆಸ್ತಿಗಳಲ್ಲಿ ಹೂಡಿಕೆ ಮಾಡಿರೋದಾಗಿ ಘೋಷಿಸಿದ್ದರು. ಈ ಸಂಬಂಧ ಅತ್ಯಧಿಕ ಟಾಕ್ಸ್ ಕಟ್ಟಬೇಕಾಗಿ ಬಂದಿತ್ತು. ಇದನ್ನೂ ಓದಿ: ಧರ್ಮಂ ಸಿನಿಮಾದ `ನಾನು ದಿಲ್ಲಿ ಹಳ್ಳಿ’ ಸಾಂಗ್ ರಿಲೀಸ್
ಅತ್ಯಧಿಕ ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿರೋದಾಗಿ ಐಶ್ವರ್ಯ ರೈ ಆದಾಯ ಪರಿಶೀಲನೆಗೆ ಒಳಪಟ್ಟಿತ್ತು. ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಬಳಿಕ ಅವರು ಸ್ಪಷ್ಟೀಕರಣ ನೀಡಿದ್ದರು. ತೆರಿಗೆ ವಿನಾಯಿತಿ ಸಂಬಂಧಿಸಿ ಅರ್ಜಿ ಸಲ್ಲಿಸಿದ್ದರು.
2022-23 ರ ಮೌಲ್ಯಮಾಪನ ವರ್ಷಕ್ಕೆ 2022 ರ ಅ.22 ರಂದು ಐಶ್ವರ್ಯಾ ರೈ ಒಟ್ಟು 39 ಕೋಟಿ ರೂ. ಆದಾಯವನ್ನು ಘೋಷಿಸಿದರು. ಇದರ ಆಧಾರದ ಮೇಲೆ ಮೌಲ್ಯಮಾಪನ ಅಧಿಕಾರಿ ಐಶ್ವರ್ಯಾ ಅವರ ಅಂದಾಜು ಆದಾಯವನ್ನು 43.44 ಕೋಟಿ ರೂ.ಗೆ ಹೆಚ್ಚಿಸಿ, ನಿಯಮ 8ಡಿ ಅನ್ನು ಅನ್ವಯಿಸಿ 4.60 ಕೋಟಿ ರೂ.ಗಳನ್ನು ರದ್ದುಗೊಳಿಸಿತ್ತು. ಇದೀಗ ಹೆಚ್ಚುವರಿ ಟ್ಯಾಕ್ಸ್ ಕಟ್ಟದಂತೆ ಐಶ್ವರ್ಯ ರೈ ಪರ ಆದೇಶ ಬಂದಿದೆ. ದೆಹಲಿ ಹೈಕೋರ್ಟ್ ವ್ಯಕ್ತಿತ್ವ ಹಕ್ಕುಗಳ ಪ್ರಕರಣದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆ. ಇದನ್ನೂ ಓದಿ: ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ, ತುಳು ಚನ್ನಾಗಿ ಬರುತ್ತೆ: ಸುನೀಲ್ ಶೆಟ್ಟಿ


