ಮಾವನ ಮೇಲೆ ಮುನಿಸಿಕೊಂಡ್ರಂತೆ ಐಶ್ವರ್ಯಾ ರೈ!

Public TV
1 Min Read
aish

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮಾವ ಅಮಿತಾಬ್ ಬಚ್ಚನ್ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಐಶ್ವರ್ಯ ರೈ ತಮ್ಮ ಬಿಡುವಿನ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಇಚ್ಚಿಸುವ ಮಹಿಳೆ. ಶೂಟಿಂಗ್ ನಿಂದ ಬಿಡುವು ಸಿಕ್ಕ ಕೂಡಲೇ ಪತಿ ಅಭಿಷೇಕ್ ಬಚ್ಚನ್, ಪುತ್ರಿ ಆರಾಧ್ಯ, ಮಾವ ಅಮಿತಾಬ್ ಬಚ್ಚನ್ ಮತ್ತು ಅತ್ತೆ ಜಯಾ ಬಚ್ಚನ್ ಜೊತೆ ಪ್ರವಾಸವನ್ನು ಕೈಗೊಳ್ಳುತ್ತಾರೆ. ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ಪತಿ ಮತ್ತು ಪುತ್ರಿಯೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಮಾವನ ಮೇಲಿನ ಮುನಿಸಿನಿಂದಾಗಿಯೇ ಅಮಿತಾಬ್ ಬಚ್ಚನ್ ಜೊತೆ ಐಶ್ವರ್ಯಾ ಕಾಣಿಸಿಕೊಳ್ಳುತ್ತಿಲ್ಲ ಎಂದು ಬಾಲಿವುಡ್ ಗಲ್ಲಿಗಳು ಹೇಳುತ್ತಿವೆ.

Amitabh Aishwarya

ಮುನಿಸ್ಯಾಕೆ? ಬಾಲಿವುಡ್ ಕಿಸ್ಸಿಂಗ್ ಸ್ಟಾರ್ ಇಮ್ರಾನ್ ಹಶ್ಮಿ ಜೊತೆ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ. ಈ ಇಮ್ರಾನ್ ಹಶ್ಮಿ ಹೇಳಿಕೆಯಿಂದ ಐಶ್ವರ್ಯಾ ರೈ ಮುನಿಸಿಕೊಂಡಿದ್ದರು. ಈಗ ಇಮ್ರಾನ್ ಹಶ್ಮಿ ಸಿನಿಮಾದಲ್ಲಿ ಬಿಗ್ ಬಿ ಬಣ್ಣ ಹಚ್ಚುತ್ತೀರೋದಕ್ಕೆ ಐಶ್ ಮುನಿಸಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ಬಿತ್ತರಿಸಿದೆ.

ಇಮ್ರಾನ್ ಹಶ್ಮಿ ಹೇಳಿದ್ದೇನು? ಎರಡು ವರ್ಷಗಳ ಹಿಂದೆ ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಇಮ್ರಾನ್ ಹಶ್ಮಿ ಭಾಗಿಯಾಗಿದ್ದರು. ರ್ಯಾಪಿಡ್ ಫೈರ್ ಸುತ್ತಿನ ವೇಳೆ ಐಶ್ವರ್ಯಾ ರೈ ಅವರ ಸೌಂದರ್ಯವನ್ನು ಪ್ಲಾಸ್ಟಿಕ್ ಸರ್ಜರಿ ಎಂಬರ್ಥದಲ್ಲಿ ಹೇಳಿದ್ದರು. ಹೇಳಿಕೆ ವಿವಾದವಾಗುತ್ತಿದಂತಲೇ ಇಮ್ರಾನ್ ಹಶ್ಮಿ ಕ್ಷಮೆಯನ್ನು ಕೇಳಿದ್ದರು.

Imran

ಇನ್ನು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಐಶ್ವರ್ಯಾಗೆ ಇದೂವರೆಗೂ ನಿಮ್ಮ ಬಗ್ಗೆ ಯಾವ ಹೇಳಿಕೆ ನಿಮಗೆ ಬೇಸರ ತರಿಸಿದೆ ಎಂದು ಕೇಳಲಾಗಿತ್ತು. ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಕೆಲವರು ಹೇಳಿದ್ದು ಬೇಸರ ತರಿಸಿದೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *