ಮುಂಬೈ: ಅಮಿತಾಬ್ ಬಚ್ಚನ್ ಈ ಬಾರಿ ತಮ್ಮ 75ನೇ ಹುಟ್ಟುಹಬ್ಬವನ್ನು ಮಾಲ್ಡೀವ್ಸ್ ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ಅಮಿತಾಬ್, ಜಯಾ ಬಚ್ಚನ್, ಶ್ವೇತಾ, ಐಶ್ವರ್ಯ, ಆರಾಧ್ಯ, ಅಭಿಷೇಕ್ ಮಂಗಳವಾರ ಬೆಳಗ್ಗೆ ಮಾಲ್ಡೀವ್ಸ್ ಗೆ ತೆರಳಿದ್ದು ಅಲ್ಲಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದಾರೆ.
ಕುಟುಂಬದ ಎಲ್ಲ ಸದಸ್ಯರು ಸೇರಿ ಅವರ ಹುಟ್ಟುಹಬ್ಬವನ್ನು ಬೀಚಿನಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಬಿಗ್-ಬಿ ಮಾಲ್ಡೀವ್ಸ್ ನಲ್ಲಿ ತಮ್ಮ ಮೊಮ್ಮಕ್ಕಳ ಜೊತೆ ನೀರಿನಲ್ಲಿ ಆಟನಾಡಿ ನಂತರ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.
Advertisement
Advertisement
ಮಾಲ್ಡೀವ್ಸ್ ಗೆ ಫ್ಯಾಮಿಲಿ ರಜೆಯಲ್ಲಿ ಹೋಗಿ ಬರಲು ಅಭಿಷೇಕ್ ಮತ್ತು ಶ್ವೇತ ಇಬ್ಬರೂ ತಂದೆಯ ಮನವೊಲಿಸಿದ್ದಾರೆ. ಮಾಲ್ಡೀವ್ಸ್ ಬೀಚ್‍ನಲ್ಲಿ ದೊಡ್ಡ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಆಚರಿಸಲು ಐಶ್ವರ್ಯ, ಅಭಿಷೇಕ್ ಮತ್ತು ಶ್ವೇತ ಪ್ಲಾನ್ ನಡೆಸಿದ್ದಾರೆ.
Advertisement
Advertisement
ನಾಲ್ಕು ದಿನಗಳ ಕಾಲ ಬಚ್ಚನ್ ಫ್ಯಾಮಿಲಿ ಮಾಲ್ಡೀವ್ಸ್ ನಲ್ಲಿ ತಂಗಲಿದ್ದು, ಜೆಟ್ ಸ್ಕಿಟಿಂಗ್, ಸೇಲಿಂಗ್ ನಂತಹ ಹಲವು ನೀರಿನ ಗೇಮ್ ಆಡಲಿದ್ದಾರೆ. ಯಾಚ್ ಪಾರ್ಟಿಯನ್ನು ಕೂಡ ಆಯೋಜಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.