ಮುಂಬೈ: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ತಮ್ಮ ಮುಂದಿನ ಚಿತ್ರ `ಫ್ಯಾನಿ ಖಾನ್’ ಚಿತ್ರದಲ್ಲಿ ನಟ ಆರ್.ಮಾಧವನ್ ಜೊತೆ ನಟಿಸಲು ಇಷ್ಟವಿಲ್ಲ ಎಂದು ನಿರ್ಮಾಪಕರಿಗೆ ತಿಳಿಸಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ಅಂಗಳಲ್ಲಿ ಹರಿದಾಡುತ್ತಿದೆ.
ಸಿನಿಮಾದಲ್ಲಿ ಐಶ್ವರ್ಯಗೆ ಜೊತೆಯಾಗಿ ನಟಿಸಲು ನಟರಾದ ಆರ್.ಮಾಧವನ್ ಮತ್ತು ರಾಜ್ಕುಮಾರ್ ರಾವ್ ಇಬ್ಬರನ್ನು ಆಯ್ಕೆ ಮಾಡಲಾಗಿತ್ತು. ಕೊನೆ ಹಂತದಲ್ಲಿ ಸಿನಿಮಾದ ನಿರ್ದೇಶಕ ರಾಕೇಶ್ ಓಂಪ್ರಕಾಶ್ ನಟ ಆರ್.ಮಾಧವನ್ರನ್ನು ಆಯ್ಕೆ ಮಾಡಿದ್ದಾರೆ. ಆದರೆ ಇದು ಐಶ್ವರ್ಯರಿಗೆ ಇರುಸು-ಮುರುಸು ತರಿಸಿದ್ದು, ಈ ಮೊದಲು ರಾಜ್ಕುಮಾರ್ ರಾವ್ ಜೊತೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಐಶ್ವರ್ಯ ರೈ ಜೊತೆ ನಟಿಸಲು ಈ ಕಾರಣಕ್ಕಾಗಿ ಹಿಂದೆ ಸರಿದ ಸಲ್ಮಾನ್
ಐಶ್ವರ್ಯಾ ಬಗ್ಗೆ ಕೇಳಿಬರುತ್ತಿವೆ ಸುದ್ದಿಗಳೆಲ್ಲಾ ಸುಳ್ಳು. ಜನರ ಗಮನವನ್ನು ಬೇರಡೆ ಸೆಳೆಯಲು ಈ ರೀತಿಯ ಸುಳ್ಳು ಸುದ್ದಿಗಳನ್ನು ಹುಟ್ಟಿಸಲಾಗುತ್ತಿದೆ. ನಾವೆಲ್ಲರೂ ಒಂದು ತಂಡ ಹಾಗೂ ಫ್ಯಾನಿ ಖಾನ್ ಇಡೀ ತಂಡಕ್ಕೆ ಇಷ್ಟವಾದ ಸಿನಿಮಾ ಎಂದು ನಿರ್ದೇಶಕ ಮೆಹ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಫ್ಯಾನಿ ಖಾನ್ ಚಿತ್ರತಂಡದ ಕುರಿತು ಪ್ರತಿಕ್ರಿಯಿಸಿದ ಅನಿಲ್ ಕಪೂರ್ ಮತ್ತು ಐಶ್ವರ್ಯಾ ರೈ ಬಚ್ಚನ್, ಎಲ್ಲ ಕಲಾವಿದರು ತಮ್ಮ ಪಾತ್ರಗಳನ್ನು ನಟಿಸಲು ಸಿದ್ಧರಾಗಿದ್ದಾರೆ. ನಾವೆಲ್ಲರೂ ಸಂಪೂರ್ಣ ವೃತ್ತಿಪರರಾಗಿದ್ದೇವೆ. ಬೇರೆ ಕಲಾವಿದರ ಪಾತ್ರಗಳಲ್ಲಿ ನಾವುಗಳು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಇದೊಂದು ಅದ್ಭುತ ಕಥೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ತೆರೆಯ ಮೇಲೆ ತರಲು ನಾವು ಕಾತರರಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ತನಿಗಿಂತ ಚಿಕ್ಕ ವಯಸ್ಸಿನ ನಟನ ಜೊತೆ ಐಶ್ವರ್ಯ ರೈ ರೊಮ್ಯಾನ್ಸ್?
ಫೇನಿ ಖಾನ್ ಡಚ್ ಭಾಷೆಯ `ಎವರಿಬಡಿ ಫೇಮಸ್’ ಸಿನಿಮಾದ ರಿಮೇಕ್ ಆಗಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಐಶ್ವರ್ಯ ರೈ ಬಚ್ಚನ್, ಅನಿಲ್ ಕಪೂರ್ ಮತ್ತು ಆರ್. ಮಾಧವನ್ ಕಾಣಿಸಿಕೊಳ್ಳಲಿದ್ದಾರೆ.