ಬಾಲಿವುಡ್ ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ (Ashutosh Gowariker) ಪುತ್ರ ಕೋನಾರ್ಕ್ ಮದುವೆ ಮುಂಬೈನಲ್ಲಿ ಅದ್ಧೂರಿಯಾಗಿ ಜರುಗಿದೆ. ನವಜೋಡಿಗೆ ಶುಭಕೋರಲು ಐಶ್ವರ್ಯಾ ರೈ (Aishwarya Rai)ಮತ್ತು ಅಭಿಷೇಕ್ ಬಚ್ಚನ್ ದಂಪತಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಡಿವೋರ್ಸ್ ವದಂತಿಗೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಂಗನಾ ರಣಾವತ್ ಭೇಟಿ
View this post on Instagram
Advertisement
ನಿರ್ದೇಶಕ ಅಶುತೋಷ್ ಗೋವಾರಿಕರ್ ಪುತ್ರನ ಮದುವೆ ಸಂಭ್ರಮಕ್ಕೆ ಬಾಲಿವುಡ್ ಸಾಕ್ಷಿಯಾಗಿದೆ. ಈ ಮದುವೆಗೆ ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಐಶ್ವರ್ಯಾ ರೈ ಹಾಜರಿ ಹಾಕಿದ್ದಾರೆ. ಈ ಮೂಲಕ ಅವರ ಮದುವೆ ದಾಂಪತ್ಯ ಸರಿಯಿಲ್ಲ ಎಂದು ಟೀಕಿಸುವವರಿಗೆ ಉತ್ತರ ನೀಡಿದ್ದಾರೆ. ಐಶ್ವರ್ಯಾ ದಂಪತಿ ಜೊತೆಯಾಗಿ ಮಗದೊಮ್ಮೆ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.
Advertisement
Advertisement
ಇನ್ನೂ ಈ ಮದುವೆಗೆ ಶಾರುಖ್ ಖಾನ್, ಆಮೀರ್ ಖಾನ್, ಪೂಜಾ ಹೆಗ್ಡೆ, ಚಂಕಿ ಪಾಂಡೆ, ವಿದ್ಯಾ ಬಾಲನ್, ಸೋನಾಲಿ, ರಿತೇಶ್ ದೇಶ್‌ಮುಖ್ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.