ಅಭಿಷೇಕ್ ಬಚ್ಚನ್- ಐಶ್ವರ್ಯ (Aishwarya Rai) ಇಬ್ಬರೂ ಡಿವೋರ್ಸ್ ಹೊಸ್ತಿಲಲ್ಲಿ ನಿಂತಿದ್ದಾರೆ. ಆದರೂ ಅದ್ಯಾಕೆ ಡಿವೋರ್ಸ್ ಕೊಡುತ್ತಿಲ್ಲ? ಅದಕ್ಕಿರುವ ಕಾರಣಗಳೇನು? ಕೋಟಿ ಕೋಟಿ ಹಣದ ವಿಚಾರವೇ ಡಿವೋರ್ಸ್‌ಗೆ ಅಡ್ಡಗಾಲು ಹಾಕಿದೆಯಾ? ಐಶ್ವರ್ಯಗೆ ಅದೆಷ್ಟು ಕೋಟಿ ಅಭಿಷೇಕ್ ಬಚ್ಚನ್ (Abhishek Bachchan) ಕೊಡಬೇಕಾಗುತ್ತದೆ? ಡಿವೋರ್ಸ್ ಅಸಲಿ ವಿಚಾರ ಇಲ್ಲಿದೆ. ಇದನ್ನೂ ಓದಿ:ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ರಣ್‌ಬೀರ್-ಆಲಿಯಾ ದಂಪತಿ
Advertisement
ಹೆಚ್ಚು ಕಮ್ಮಿ ಇಬ್ಬರೂ ಬೇರೇ ಆಗಿ ಒಂದು ತಿಂಗಳಾಗಿದೆ. ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಇನ್ನೇನು ಡಿವೋರ್ಸ್ ಕೊಡುತ್ತಾರೆ. ಪ್ರತ್ಯೇಕ ಮನೆಯಲ್ಲಿ ವಾಸ ಮಾಡಲು ಸಜ್ಜಾಗುತ್ತಾರೆ. ಅದನ್ನು ಅಧಿಕೃತ ಘೋಷಣೆ ಮಾಡುತ್ತಾರೆ. ಇದೇ ಮಾತು ಎಲ್ಲಾ ಕಡೆ ಹರಿದಾಡುತ್ತಿದೆ. ಅದಕ್ಕೆ ಪೂರಕವಾಗಿ ಐಶ್ವರ್ಯ ಗಂಡನ ಮನೆ ಬಿಟ್ಟು ಅಮ್ಮನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಹೀಗಿದ್ದರೂ ಅದ್ಯಾಕೆ ಡಿವೋರ್ಸ್ ಕೊಡುತ್ತಿಲ್ಲ ಗೊತ್ತಾ? ಇದಕ್ಕೆಲ್ಲಾ ಕಾರಣ ಹಣ. ಅದೇ ಅಭಿಷೇಕ್‌ಗಿರುವ ತಲೆ ನೋವು. ತಿಂಗಳಿಗೆ ಇಂತಿಷ್ಟು ಮಾಸಾಶನ ಜೊತೆಗೆ ಅಪ್ಪನ ಆಸ್ತಿಯಲ್ಲಿ ಪತ್ನಿಗೆ ಪಾಲು ಕೊಡಬೇಕಿದೆ. ಇದರಿಂದ ಅಭಿಷೇಕ್ ಕೂಡ ಯೋಚನೆ ಮಾಡ್ತಿದ್ದಾರೆ.
Advertisement
Advertisement
ಡಿವೋರ್ಸ್ (Divorce) ನೀಡಿದರೆ ಪತಿ ಸಂಬಳದಲ್ಲಿ 25%ರಷ್ಟು ಹಣ ಪತ್ನಿಗೆ ಸೇರುತ್ತದೆ. ಅಭಿಷೇಕ್‌ಗೆ ಎರಡು ಕೋಟಿ ಆದಾಯ. ಅಂದರೆ ತಿಂಗಳಿಗೆ 40 ಲಕ್ಷ ನೀಡಬೇಕು. ಹಾಗೇ ಅಮಿತಾಬ್ ಹಂಚಿದ ಆಸ್ತಿಯಲ್ಲೂ ಐಶ್ವರ್ಯಗೆ ಪಾಲು ನೀಡಬೇಕು. ಆ ರಗಳೆ ಬೇಡವೆಂದು ಅಭಿ ಇನ್ ಸೈಲೆಂಟ್ ಆಗಿದ್ದಾರೆ.
Advertisement
ಅಂದಹಾಗೆ ಐಶ್ವರ್ಯ ಒಟ್ಟು ಆಸ್ತಿ 700 ಕೋಟಿ. ಅಭಿಷೇಕ್ ಕೇವಲ 200 ಕೋಟಿ ಆಸ್ತಿ ಹೊಂದಿದ್ದಾರೆ. ಅದೇನೇ ಇರಲಿ ಸ್ಟಾರ್ ದಂಪತಿಗಳ ವಿಚಾರ ಈಗ ಬಾಲಿವುಡ್‌ನಲ್ಲಿ ಬಿಸಿ ಬಿಸಿ ಸುದ್ದಿಯಾಗಿ ಹರಿದಾಡುತ್ತಿದೆ. ಡಿವೋರ್ಸ್ ಸುದ್ದಿ ಬಗ್ಗೆ ಅಧಿಕೃತ ಹೇಳಿಕೆ ಕೊಡುತ್ತಾರಾ? ಕಾಯಬೇಕಿದೆ.