ಬೆಂಗಳೂರು: ಡಿಕೆ ಸುರೇಶ್ (DK Suresh) ಸಹೋದರಿ ಅಂತಾ ಕೋಟಿ ಕೋಟಿ ವಂಚನೆ ಮಾಡಿದ ಪ್ರಕರಣದ ಸಂಬಂಧ ಆರೋಪಿಯಾಗಿರುವ ಐಶ್ವರ್ಯಗೌಡ (Aishwarya Gowda) ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
Advertisement
ನಾಲ್ವರ ಸಿಡಿಆರ್ ಪಡೆದುಕೊಂಡ ಸಂಬಂಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ, ಸಿಡಿಆರ್ ಪಡೆದ ಪ್ರಕರಣದ ತನಿಖೆಗಾಗಿಯೇ ಹೊಸ ತನಿಖಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಎಸಿಪಿ ಚಂದನ್ ಕುಮಾರ್ (ACP Chandan) ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಪ್ರಾಥಮಿಕ ತನಿಖೆಯಲ್ಲಿ ಐಶ್ವರ್ಯಗೌಡ ರಾಮನಗರದ ಹಲವು ರಾಜಕೀಯ ಮುಖಂಡರ ಸಿಡಿಆರ್ ಕಲೆಕ್ಟ್ ಮಾಡಿರೋದು ಗೊತ್ತಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್ ರಾಜಕೀಯಕ್ಕೆ ಜನರು ಶಾರ್ಟ್ ಸರ್ಕ್ಯೂಟ್ ನೀಡಿದ್ದಾರೆ – ಇದು ವಿಕಾಸದ ಗೆಲುವು ಎಂದ ಮೋದಿ
Advertisement
Advertisement
ಇದಕ್ಕೆ ಕೆಲ ಪೊಲೀಸ್ ಅಧಿಕಾರಿಗಳನ್ನು ಕೂಡ ಬಳಸಿಕೊಂಡು ಅವರ ಜೊತೆಗೆ ಹಣದ ವ್ಯವಹಾರ ನಡೆಸಿದ್ದಾಳೆ. ಯಾವುದೇ ಪ್ರಕರಣದ ತನಿಖಾಧಿಕಾರಿಗೆ ಮಾತ್ರ ಸಿಡಿಆರ್ ಪಡೆಯುವ ಅಧಿಕಾರವಿದ್ದು, ಐಶ್ವರ್ಯಗೌಡ ಹೇಗೆ ರಾಜಕೀಯ ಮುಖಂಡರ ಸಿಡಿಆರ್ ಪಡೆದುಕೊಂಡಿದ್ದಾಳೆ. ಅದನ್ನು ಹೇಗೆ ಯಾವ ಕಾರಣಕ್ಕೆ ಬಳಸಿಕೊಳ್ತದ್ಲು ಅನ್ನೋ ಅನುಮಾನ ಪೊಲೀಸರನ್ನ ಕಾಡಿದೆ. ಇದೇ ಕಾರಣಕ್ಕೆ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಸಿಡಿಆರ್ ಪ್ರಕರಣವನ್ನೇ ಪ್ರತ್ಯಕವಾಗಿ ತನಿಖೆಗೆ ಆದೇಶ ನೀಡಲಾಗಿದೆ. ಇದನ್ನೂ ಓದಿ: ಕೇಜ್ರಿ`ವಾಲ್’ ಛಿದ್ರಗೊಳಿಸಿದ ಮೋದಿ-ಶಾ ಜೋಡಿಯ ಸಾಮ, ದಾನ, ಬೇಧ, ದಂಡ ತಂತ್ರ?
Advertisement
ಎಸಿಪಿ ಚಂದನ್‌ಗೆ ತನಿಖೆ ಹೊಣೆ:
ಅಕ್ರಮವಾಗಿ ಸಿಡಿಆರ್ ಪಡೆದ ಪ್ರಕರಣದ ತನಿಖೆಯನ್ನು ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ಅವರಿಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ವಹಿಸಿದ್ದಾರೆ. ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ದೂರುದಾರರಾಗುರುವ ಕಾರಣ ತನಿಖೆ ಹೊಣೆ ಚಂದನ್ ಅವರ ಹೆಗಲಿಗೆ ಬಿದ್ದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಅವರ ತಂಡದ ವಿರುದ್ಧ ಎಸಿಪಿ ಚಂದನ್ ತನಿಖೆ ನಡೆಸಿದ್ದರು. ಇದನ್ನೂ ಓದಿ: ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ