ವಸ್ತುಪ್ರಕಾರ, ರಾಕೆಟ್, ನಡುವೆ ಅಂತರವಿರಲಿ (Naduve Antaravirali) ಸಿನಿಮಾಗಳ ಮೂಲಕ ಗಮನ ಸೆಳೆದ ಕರಾವಳಿ ಬೆಡಗಿ ಐಶಾನಿ ಶೆಟ್ಟಿ (Aishani Shetty) ಅವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ. ದೀಪಗಳ ಜೊತೆ ಹಬ್ಬ ಆಚರಿಸುತ್ತಿರುವ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
- Advertisement -
ಸಿನಿ ಸೆಲೆಬ್ರಿಟಿಗಳು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದರಂತೆ ನಟಿ ಐಶಾನಿ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಕುಡ್ಲದ ಕುವರಿ ಮಿಂಚಿದ್ದಾರೆ. ದೀಪ ಹಚ್ಚಿರುವ ಹಣತೆಯನ್ನು ಕೈಯಲ್ಲಿ ಹಿಡಿದು ಸುಂದರವಾಗಿ ಕ್ಯಾಮೆರಾ ಪೋಸ್ಟ್ ಕೊಟ್ಟಿದ್ದಾರೆ.
- Advertisement -
- Advertisement -
ಇನ್ನೂ ಫ್ಯಾನ್ಸ್‌ಗೆ ದೀಪಗಳ ಹಬ್ಬ ಎಲ್ಲರಿಗೂ ಶುಭ ತರಲಿ ಎಂದು ನಟಿ ವಿಶ್ ಮಾಡಿದ್ದಾರೆ. ಸದ್ಯ ಐಶಾನಿ ಲುಕ್ ಮತ್ತು ವಿಶ್‌ಗೆ ಅಭಿಮಾನಿಗಳು ಕೂಡ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ
- Advertisement -
ಇನ್ನೂ ‘ಶಾಕುಂತಲೆ ಸಿಕ್ಕಳು’ ಎಂದು ಪಡ್ಡೆಹುಡುಗರ ನಿದ್ದೆ ಕದ್ದ ನಟಿ ಈಗ ತಾವೇ ಡೈರೆಕ್ಷನ್ ಕ್ಯಾಪ್ ಧರಿಸಲು ಸಿದ್ಧರಾಗಿದ್ದಾರೆ. ಒಂದು ವಿಭಿನ್ನವಾದ ಕಥೆಯನ್ನು ಸ್ವತಃ ಐಶಾನಿ ಸಿದ್ಧಪಡಿಸಿದ್ದಾರೆ.
ಐಶಾನಿ ಶೆಟ್ಟಿಗೆ ತಾವು ಬಹುದಿನಗಳಿಂದ ನಿರ್ದೇಶಕಿ ಆಗಬೇಕು ಎಂಬ ಕನಸಿತ್ತು. ಈಗ ಆ ಕನಸಿನತ್ತ ಹೆಜ್ಜೆ ಇಡ್ತಿದ್ದಾರೆ. ಅದಕ್ಕಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹೊಳೆದ ಕಥೆಯ ಮೇಲೆ ಕೆಲಸ ಮಾಡಿ ಈಗ ನಟನೆಯ ಜೊತೆಗೆ ನಿರ್ದೇಶನ ಮಾಡಲು ರೆಡಿಯಾಗಿರೋದಾಗಿ ತಿಳಿಸಿದ್ದರು.
ಈ ಹಿಂದೆ ಐಶಾನಿ ‘ಕಾಜಿ’ ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದು ಹಲವು ಚಿತ್ಸೋತ್ಸವದಲ್ಲಿ ಆಯ್ಕೆಯಾಗಿ, ಮೆಚ್ಚುಗೆ ಕೂಡ ಪಡೆಯಿತು. ಈ ಸಿನಿಮಾದ ಅನುಭವವೇ ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶನ ಮಾಡುತ್ತ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಈಗ ಮೊದಲ ಚಲನಚಿತ್ರ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ನನ್ನೂರಿನ ಭಾಗದಲ್ಲಿ ನಡೆಯುವ ಕಥೆಯಿದು. ಕಂಟೆಂಟ್ ಇರುವಂಥ ಕಮರ್ಷಿಯಲ್ ಚಿತ್ರವಿದು. ಇದರಲ್ಲಿ ಹೀರೊ ಅಥವಾ ಹೀರೋಯಿನ್ ಇರುವುದಿಲ್ಲ. ಕಥೆಯೇ ಹೀರೋ ಆಗಿರುತ್ತದೆ ಎಂದು ತಿಳಿಸಿದ್ದರು. ಸದ್ಯದಲ್ಲೇ ಐಶಾನಿ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಹಂಚಿಕೊಳ್ಳಲಿದ್ದಾರೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.