ನವದೆಹಲಿ: ಆರ್ಥಿಕ ಮಟ್ಟವನ್ನು ಸುಧಾರಿಸಲು ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕಗಳಲ್ಲಿ ಶೇ. 20-25ರಷ್ಟು ಹೆಚ್ಚಳ ಮಾಡುತ್ತಿರುವುದಾಗಿ ಭಾರ್ತಿ ಏರ್‌ಟೆಲ್ ಘೋಷಿಸಿದೆ.
Advertisement
ವಾಯ್ಸ್ ಕರೆ, ಡೇಟಾ, ಅನ್‌ಲಿಮಿಟೆಡ್ ವಾಯ್ಸ್ ಕಾಲ್‌ನ ವಿವಿಧ ಪ್ಲಾನ್‌ಗಳ ದರ ಹೆಚ್ಚಿಸಲಾಗಿದೆ. ಎಂಟ್ರಿ ಲೆವೆಲ್ ವಾಯ್ಸ್ ಕರೆ ಪ್ಲಾನ್‌ನ ಶುಲ್ಕ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಶುಲ್ಕದಲ್ಲಿ ಶೇ. 25ರಷ್ಟು ಹೆಚ್ಚಿಸಲಾಗಿದೆ. ಇದು ನವೆಂಬರ್ 26ರಿಂದ ಜಾರಿಗೆ ಬರಲಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಕೊಹ್ಲಿ ಪುತ್ರಿಯನ್ನು ರೇಪ್ ಮಾಡ್ತಿನಿ ಅಂದಿದ್ದ ಐಐಟಿ ಪದವೀಧರನಿಗೆ ಜಾಮೀನು
Advertisement
ಎಷ್ಟು ಏರಿಕೆ?
28 ದಿನಗಳ ವ್ಯಾಲಿಡಿಟಿ ಇದ್ದ 79 ರೂ. ಅನ್ನು 99 ರೂ.ಗೆ ಹೆಚ್ಚಿಸಲಾಗಿದೆ. ಅನ್‌ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯದಲ್ಲಿ ಈಗಿರುವ 149 ರೂ. ಪ್ಯಾಕ್ ಅನ್ನು 179 ರೂ.ಗೆ ಹೆಚ್ಚಿಸಿದೆ. 219 ರೂ. ಯೋಜನೆಯು 265 ರೂ.ಗೆ ಏರಿಕೆಯಾಗಿದೆ. 249 ರೂ. ಪ್ಯಾಕ್ 299 ರೂ.ಗೆ ಹಾಗೂ 298 ರೂ. ಯೋಜನೆಯು 359 ರೂ.ಗೆ ಹೆಚ್ಚಳವಾಗಿದೆ.
Advertisement
Advertisement
56 ದಿನಗಳ ವ್ಯಾಲಿಡಿಟಿ ಇದ್ದ 449 ರೂ. ಪ್ಯಾಕ್ 549 ರೂ.ಗೆ ಏರಿ 84 ದಿನಗಳ ವ್ಯಾಲಿಡಿಟಿ ಇದ್ದ 379 ರೂ.ಯ ಪ್ಯಾಕ್ 455 ರೂ.ಗೆ ಏರಿಕೆಯಾಗಿದೆ. 598 ರೂ. ಪ್ಯಾಕ್ 719 ರೂ. ಆಗಿದೆ. 698 ರೂ. ಯೋಜನೆ 839 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ರೈತರ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಪತ್ರಿಭಟನೆ ಮುಂದುವರಿಯುತ್ತದೆ: ಟಿಕಾಯತ್
365 ದಿನಗಳ ವ್ಯಾಲಿಡಿಟಿ ಹೊಂದಿದ್ದ ಪ್ಯಾಕ್‍ಗಳು 1,498 ರೂ.ನಿಂದ 1,799 ರೂ.ಗೆ ಹೆಚ್ಚಿಸಲಾಗಿದೆ. 2,498 ರೂ. ಪ್ಯಾಕ್ 2,999 ರೂ.ಗೆ ಹೆಚ್ಚಳವಾಗಿದೆ. ಇನ್ನೂ ಇತರ ರೀಚಾರ್ಜ್‌ಗಳಿಗೆ ಅನ್ವಯವಾಗದ ಎನ್‍ಎ(ನಾಟ್ ಅಪ್ಲಿಕೇಬಲ್) ಪ್ಯಾಕ್ ಗಳೂ ಏರಿಕೆಯಾಗಿವೆ. 3ಜಿಬಿ ಡೇಟಾ ಪ್ಯಾಕ್ 48 ರೂ.ನಿಂದ 58 ರೂ.ಗೆ ಹೆಚ್ಚಳಗೊಂಡಿದೆ. 12ಜಿಬಿಯ ಪ್ಯಾಕ್ 98 ರೂ.ನಿಂದ 118 ರೂ.ಗೆ ಏರಿಕೆಯಾಗಿದೆ ಹಾಗೂ 50ಜಿಬಿ ಡೇಟಾದ ಪ್ಯಾಕ್ 251 ರೂ.ನಿಂದ 301 ರೂ.ಗೆ ಹೆಚ್ಚಳವಾಗಿದೆ.